Google search engine
Home ಕಾರ್ಕಳ ಕಾರ್ಕಳ ಹೂವಿನ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಫ್ರಾನ್ಸಿಸ್‌ ಡಿಸೋಜ.

ಕಾರ್ಕಳ ಹೂವಿನ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಫ್ರಾನ್ಸಿಸ್‌ ಡಿಸೋಜ.

0
11

ಕಾರ್ಕಳ ಹೂವಿನ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಫ್ರಾನ್ಸಿಸ್‌ ಡಿಸೋಜ.

ಹೆಬ್ರಿ : ಹೂವಿನ ಬೆಳೆಗಾರರ ಸಹಕಾರ ಸಂಘ ನಿಯಮಿತ ಕಾರ್ಕಳ ಇದರ ಮುಂದಿನ ೫ ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಫ್ರಾನ್ಸಿಸ್‌ ಡಿಸೋಜ ಬೆಳ್ಮಣ್‌ ಪುನ:ರಾಯ್ಕೆಗೊಂಡಿದ್ದಾರೆ. ಗುರುವಾರ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕೆ. ರಾಘವೇಂದ್ರ ಪೈ ಕೌಡೂರು ರಂಗನಪಲ್ಕೆ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಮಂದಾರ ಆಚಾರ್ಯ ಮಾರಾಳಿ ನಾಲ್ಕೂರು, ನವೀನ್‌ ಶೆಣೈ ಬೆಳ್ಮಣ್‌, ಪ್ಲೋರ ಮೆಂಡೋನ್ಸ ಬೆಳ್ಮಣ್‌, ವೆಂಕಟರಮಣ ಶರ್ಮ ಇರ್ವತ್ತೂರು ಕಾರ್ಕಳ, ಶಶಿಕಾಂತ್‌ ಭಟ್‌ ಬೆಳ್ಮಣ್‌, ಪ್ಲಾವಿಯ ಆರಾನ ಕೌಡೂರು ರಂಗನಪಲ್ಕೆ, ಲವೀಟ ಕರ್ಡೋಜಾ ಬೆಳ್ಮಣ್‌, ಸುಕುಮಾರ್‌ ಮುನಿಯಾಲ್‌ ಮತ್ತು ಅಮರ್‌ ಪಳ್ಳಿ ಕಾರ್ಕಳ ಅವರು ಆಯ್ಕೆಯಾಗಿದ್ದಾರೆ. ಉಡುಪಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಕೆ.ಆರ್.‌ ರೋಹಿತ್‌ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲತಾ ಸಹಕರಿಸಿದರು.

LEAVE A REPLY

Please enter your comment!
Please enter your name here