Sunday, August 9, 2026
Homeಹೆಬ್ರಿಹೆಬ್ರಿ : ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ‘ಪದವಿ ಪ್ರದಾನ ಕಾರ್ಯಕ್ರಮ’ ಸಂಪನ್ನ

ಹೆಬ್ರಿ : ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ‘ಪದವಿ ಪ್ರದಾನ ಕಾರ್ಯಕ್ರಮ’ ಸಂಪನ್ನ

ಶಾಲಾ ಮಟ್ಟದಲ್ಲಿ ಕಲಿತ ಜವಾಬ್ದಾರಿಯ ಪಾಠ ಭವಿಷ್ಯದಲ್ಲಿ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ: ಪ್ರಕಾಶ ಪೂಜಾರಿ

ಮಿಥಿಲಾ ನಗರದ ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ‘ಪದವಿ ಪ್ರದಾನ ಕಾರ್ಯಕ್ರಮ’ವು ಅನ್ನಪೂರ್ಣ ಸಭಾಂಗಣದಲ್ಲಿ ನೆರವೇರಿತು.

ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಎಚ್ ಗುರುದಾಸ್ ಶೆಣೈ ಚುನಾಯಿತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಪ್ರಮಾಣ ವಚನ ಬೋಧಿಸಿದರು.
ಕೆಪಿಎಸ್ ಮುನಿಯಾಲಿನ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ಮಾತನಾಡಿ “ಶಾಲಾ ಮಟ್ಟದಲ್ಲಿ ಕಲಿತ ಜವಾಬ್ದಾರಿಯ ಪಾಠ ಭವಿಷ್ಯದಲ್ಲಿ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ. ನಾಯಕತ್ವದ ಜೊತೆಗೆ ಮಾನವೀಯತೆ ಅಗತ್ಯ” , ವಿದ್ಯಾರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಿಗೆ ಕೂಡ ‘ಸೋಲನ್ನು ಕೊನೆಯೆಂದೂ ಸ್ವೀಕರಿಸಬೇಡಿ’ ಎಂದರು.

ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲ ಅರುಣ್ ಎಚ್ ವೈ, ಆಡಳಿತಾಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ವಿದ್ಯಾಲಯದ ಮುಖ್ಯ ಶಿಕ್ಷಕಿ ಶಕುಂತಲಾ, ಸಮನ್ವಯ ಅಧಿಕಾರಿ ರಕ್ಷಿತ್, ಪ್ರೀತಿ ಶೆಟ್ಟಿ, ಸುಗೀತಾ, ಗುಣವತಿ ಉಪಸ್ಥಿತರಿದ್ದರು.

ಶಿಕ್ಷಕಿ ಸೌಮ್ಯ ಉಪಾಧ್ಯಾಯ ಮತ್ತು ವಿದ್ಯಾರ್ಥಿನಿ ಪ್ರಿಯಾ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಪ್ರತಿಭಾ ಅತಿಥಿಗಳನ್ನು ಪರಿಚಯಿಸಿದರು. ಸಂಸ್ಕೃತಿ ಜೆ ನಾಯಕ್ ಸ್ವಾಗತಿಸಿದರು. ನಿಶ್ಚಿತ್ ಕೆ.ವಿ. ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments