Thursday, September 24, 2026
Homeಹೆಬ್ರಿಕಳ್ತೂರು ಸಂತೇಕಟ್ಟೆ ಶಾಲೆಯ ಇಕೋ ಕ್ಲಬ್‌ ನಿಂದ ಹಂದಿಕಲ್ಲಿನಲ್ಲಿ ನೇಜಿ ನಾಟಿ ಮತ್ತು ಕೆಸರುಗದ್ದೆ ಕ್ರೀಡಾಕೂಟ

ಕಳ್ತೂರು ಸಂತೇಕಟ್ಟೆ ಶಾಲೆಯ ಇಕೋ ಕ್ಲಬ್‌ ನಿಂದ ಹಂದಿಕಲ್ಲಿನಲ್ಲಿ ನೇಜಿ ನಾಟಿ ಮತ್ತು ಕೆಸರುಗದ್ದೆ ಕ್ರೀಡಾಕೂಟ

ಕಳ್ತೂರು ಸಂತೇಕಟ್ಟೆ : ಹೆಬ್ರಿ ಸಮೀಪದ ಕಳ್ತೂರು ಸಂತೆಕಟ್ಟೆ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಪಂದನ ಇಕೋ ಕ್ಲಬ್‌ ವತಿಯಿಂದ ನಮೃತಾ ಹೋಂ ಇಂಡಸ್ಟ್ರೀಸ್‌ ಸಂತೆಕಟ್ಟೆ ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಹಂದಿಕಲ್ಲು ನಾರಾಯಣ ನಾಯ್ಕ್‌ ಪ್ರಾಯೋಜಕತ್ವದಲ್ಲಿ  ಹಂದಿಕಲ್ಲು ನಾರಾಯಣ ನಾಯ್ಕ್‌ ಅವರ ಕೃಷಿ ಕ್ಷೇತ್ರದಲ್ಲಿ ಸೋಮವಾರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಬಾಬು ನೇತ್ರತ್ವದಲ್ಲಿ ನೇಜಿ ನಾಟಿ ಮತ್ತು ಕೆಸರುಗದ್ದೆ ಕ್ರೀಡಾಕೂಟ ನಡೆಯಿತು. ವಿದ್ಯಾರ್ಥಿಗಳು ಖುಷಿಯಿಂದ ನೇಜಿ ನೆಟ್ಟು ಕೆಸರು ಗದ್ದೆಯಲ್ಲಿ ಸಂಭ್ರಮಿಸಿದರು. 

ಕೆಸರು ಗದ್ದೆ ಕ್ರೀಡಾಕೂಟದ ಪ್ರಾಯೋಜಕರಾದ ನಮೃತ ಹೋಂ ಇಂಡಸ್ಟ್ರೀಸ್ ಮಾಲಕ ಉದಯ ನಾಯಕ್, ಶಾಲಾಭಿವೃದ್ಧಿ ಸದಸ್ಯ ನಾರಾಯಣ ನಾಯ್ಕ್ ಹಂದಿ ಕಲ್ಲು ಮತ್ತು  ಶ್ರೀಲಕ್ಷ್ಮಿ ಕ್ಯಾಶ್ಯೂಸ್ ಎಚ್. ಸತೀಶ್ ಪೈ ಯವವರಿಗೆ ಶಾಲೆ ಮತ್ತು ಎಸ್‌ಡಿಎಂಸಿ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. 

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ ಪೂಜಾರಿ, ಶ್ರೀ ಕ್ಷೇತ್ರ ಜೋಮ್ಲು ಬೊಬ್ಬರ್ಯ ದೇವರ ಸೇವಾ ಸಮಿತಿ ಹಂದಿಕಲ್ಲು ಅಧ್ಯಕ್ಷ ರವೀಂದ್ರನಾಥ ಶೆಟ್ಟಿ, ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷ ಅಶೋಕ ನಾಯ್ಕ್‌, ಆರೂರು ತಿಮ್ಮಪ್ಪ ಶೆಟ್ಟಿ, ನಾರಾಯಣ ನಾಯ್ಕ್‌ ಹಂದಿಕಲ್ಲು, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಮುಖ್ಯ ಶಿಕ್ಷಕ ರಾಮಾಂಜನೇಯ ಕಮ್ಮಾರ, ಸಿಆರ್‌ಪಿ ಲಲಿತಾ, ಸಮಾಜಸೇವಕ ಮಿಥುನ್‌ ಶೆಟ್ಟಿ ಚಾರ, ಸ್ಥಳೀಯರು, ರೈತರು, ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಮಕ್ಕಳ ಪೋಷಕರು ಭಾಗವಹಿಸಿದ್ದರು. 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!