ಹೆಬ್ರಿ : ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಶೀರೂರು ಮಠ ಮತ್ತು ಉಡುಪಿ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಸಂಸ್ಕೃತ ಪ್ರತಿಭಾ ಪುರಸ್ಕಾರ ಸಮಾರಂಭವು 2026ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಸಂಸ್ಕೃತದಲ್ಲಿ 125 ಮತ್ತು 124 ಅಂಕ ಗಳಿಸಿದ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 11 ವಿದ್ಯಾರ್ಥಿಗಳಿಗೆ ಭಾನುವಾರ ಶಾಲು ಹೊದಿಸಿ, ಪ್ರಶಸ್ತಿ ಪತ್ರ, ದೀಪ, ಶ್ರೀ ಕೃಷ್ಣನ ಪ್ರಸಾದವನ್ನು ನೀಡಿ ಗೌರವಿಸಲಾಯಿತು.
ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ವಿದ್ಯಾರ್ಥಿಗಳಾದ ಲಾವಣ್ಯ ಹೆಚ್ ವಿ, ಕೆ ಸೃಜನ್ ಭಟ್, ಪ್ರಣಮ್ಯ ಕೆ, ಅನನ್ಯಾ ಯು ಹೆಬ್ಬಾರ್, ಸೃಜನ್ ಪೈ, ಪುಷ್ಕರ್ ಎಸ್ ಪೂಜಾರಿ, ಕೃತ್ತಿಕಾ ಶೆಟ್ಟಿ, ವಿಘ್ನೇಶ್ ಬಂದೂಡ್ಕರ್, ವೈಭವ್ ಎಸ್ ವಾರಿಕ್, ಶ್ರಾವ್ಯಾ, ಸಮೀಕ್ಷಾ ಎಸ್ ಹಾಗೂ ಪೋಷಕರು ಉಪಸ್ಥಿತರಿದ್ದರು. ಇವರನ್ನು ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.



