ಗೃಹಜ್ಯೋತಿ ಪರಿಷ್ಕರಣೆ ಪ್ರಕ್ರಿಯೆ ಬಾಕಿ ಉಳಿದವರಿಗೆ ಹೆಬ್ರಿಯಲ್ಲಿ ಕ್ಯಾಂಪ್.
ಹೆಬ್ರಿ : ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಭಾರತ್ ಜೋಡೋ ಯುವ ಸಂಘಟನೆಯನ್ನು ಗ್ರಾಮ ಗ್ರಾಮಗಳಲ್ಲಿ ಸ್ಥಾಪಿಸಲು ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಸಹಕಾರ ನೀಡಬೇಕು. ಆ ಮೂಲಕ ಪ್ರತಿ ಗ್ರಾಮದಲ್ಲೂ ಯುವ ಸಂಘಟನೆಯನ್ನು ಆರಂಭಿಸಬೇಕಿದೆ ಎಂದು ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್ ಹೇಳಿದರು.
ಅವರು ಹೆಬ್ರಿ ಗ್ರಾಮ ಪಂಚಾಯಿತಿಯ ರಾಜೀವ ಗಾಂಧಿ ಭವನದಲ್ಲಿ ಗುರುವಾರ ನಡೆದ ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಜ್ಯೋತಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಾಕಿ ಉಳಿದವರಿಗೆ ಆಗಸ್ಟ್ ೧೫ ರ ಬಳಿಕ ಹೆಬ್ರಿಯಲ್ಲಿ ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಮತ್ತು ಸಂಘಸಂಸ್ಥೆಗಳ ಸಹಕಾರದಲ್ಲಿ ಕ್ಯಾಂಪ್ ನಡೆಸಿ ಸಹಕಾರ ನೀಡುವುದಾಗಿ ಶಂಕರ ಶೇರಿಗಾರ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಕೈ ತಪ್ಪದಂತೆ ಎಲ್ಲರೂ ನೋಡಿಕೊಳ್ಳಿ : ಪ್ರಶಾಂತ್ ರಾವ್
ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರಸಾದ್ ರಾವ್ ಮಾತನಾಡಿ ಪಡಿತರ ಚೀಟಿ, ಗ್ರಹಜ್ಯೋತಿ, ಯುವನಿಧಿ ಸಹಿತ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಕೈ ತಪ್ಪದಂತೆ ಎಲ್ಲರೂ ನೋಡಿಕೊಳ್ಳಿ ಎಂದು ಹೇಳಿದರು.
ಗೃಹಜ್ಯೋತಿ ಪರಿಷ್ಕರಣೆ 85 ಶೇಕಡ ಪೂರ್ಣ : ಸಹಾಯಕ ಎಂಜಿನಿಯರ್ ರಾಧಿಕಾ ಅಡಿಗ.
ಗೃಹಜ್ಯೋತಿ ಪರಿಷ್ಕರಣೆ ಪ್ರಕ್ರಿಯೆ ಹೆಬ್ರಿ ಅಜೆಕಾರು ಮೆಸ್ಕಾಂ ವ್ಯಾಪ್ತಿಯಲ್ಲಿ 85 ಶೇಕಡ ಮುಗಿದಿದೆ. ಭಾಕಿ ಇದ್ದವರು ಹೆಬ್ರಿ ಮೆಸ್ಕಾಂ ಕಚೇರಿಯಲ್ಲೂ ಮಾಡಿಕೊಳ್ಳಬಹುದು ಎಂದು ಮೆಸ್ಕಾಂ ಜೆಇ ರಾಧಿಕಾ ಅಡಿಗ ತಿಳಿಸಿದರು.
ಗ್ರಹಲಕ್ಷ್ಮಿಗೆ ಹಣದ ಕೊರತೆ ಇಲ್ಲ.
ಗ್ರಹಲಕ್ಷ್ಮೀ ಹಣದ ಕಂತು ಎಪ್ರಿಲ್ ವರೆಗೆ ಫಲಾನುಭವಿಗಳಿಗೆ ತಲುಪಿದೆ, ಬಳಿಕದ 3 ತಿಂಗಳ ಹಣ ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಮತ್ತು ಜನರಲ್ ವಿಭಾಗದಂತೆ ಹಂತಹಂತವಾಗಿ ಬಿಡುಗಡೆಗೊಳ್ಳುತ್ತಿದೆ. ಯೋಜನೆಗೆ ಹಣದ ಕೊರತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ವಸಂತಿ ತಿಳಿಸಿದರು.
222 ಮಂದಿ ಯುವ ನಿಧಿಯ ಫಲಾನುಭವಿಗಳು : ಪ್ರಥ್ವಿರಾಜ್
ಹೆಬ್ರಿ ತಾಲ್ಲೂಕಿನಲ್ಲಿ ಈ ತನಕ 222 ಮಂದಿ ಯುವನಿಧಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಪ್ರಥ್ವಿರಾಜ್ ತಿಳಿಸಿದರು.
ಈಗಾಗಲೇ ಪದವಿ ಫಲಿತಾಂಶ ಬಂದಿದ್ದು ಇನ್ನೂ ಹೆಚ್ಚು ಮಂದಿಯನ್ನು ಯುವನಿಧಿಗೆ ಸೇರಿಸಿ ಅಧ್ಯಕ್ಷ ಶಂಕರ ಶೇರಿಗಾರ್ ಹೇಳಿದರು.
ಪಡಿತರ ಚೀಟಿ – ತಿದ್ದುಪಡಿ, ಹೆಸರು ಸೇರ್ಪಡೆ ಮತ್ತು ತೆಗೆಯಲು ಅವಕಾಶ : ಗುರುಪ್ರಸಾದ್
ಪಡಿತರ ಚೀಟಿಯ ತಿದ್ದುಪಡಿಗೆ, ಹೆಸರು ಸೇರ್ಪಡೆ ಮಾಡುಲು ಮತ್ತು ಹೆಸರು ತೆಗೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಆರೋಗ್ಯ ವಿಚಾರಕ್ಕೆ ತುರ್ತು ಪಡಿತರ ಚೀಟಿ ಪಡೆಯಲು ಅವಕಾಶವಿದೆ. ೪ ಚಕ್ರದ ವಾಹನ ಇದ್ದವರ ಮತ್ತು ಐಟಿ ರೀಟರ್ನ್ಸ್ ಫೈಲ್ ಮಾಡಿದವರ ಬಿಪಿಎಲ್ ಪಡಿತರ ಕಾರ್ಡು ರದ್ದಾಗುತ್ತಿದೆ ಎಂದು ಆಹಾರ ನಿರೀಕ್ಷಕ ಗುರುಪ್ರಸಾದ್ ತಿಳಿಸಿದರು.
ಬಾಕಿ ಉಳಿದ ಗ್ರಾಮಗಳ ಗ್ಯಾರಂಟಿ ಅದಾಲತ್ ಶೀಘ್ರ : ಪ್ರಶಾಂತ್ ರಾವ್
ಸರ್ಕಾರದ ವಿವಿಧ ತುರ್ತು ಕೆಲಸಗಳು ಇದ್ದ ಹಿನ್ನಲೆಯಲ್ಲಿ ಹೆಬ್ರಿ ತಾಲ್ಲೂಕಿನ ಹಲವು ಗ್ರಾಮಗಳ ಗ್ಯಾರಂಟಿ ಅದಾಲತ್ ನಡೆಸುವುದು ಭಾಕಿಯಾಗಿದೆ. ಶೀಘ್ರವಾಗಿ ನಡೆಸುತ್ತೇವೆ ಎಂದು ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರಸಾದ್ ರಾವ್ ಮತ್ತು ಅಧ್ಯಕ್ಷ ಶಂಕರ ಶೇರಿಗಾರ್ ತಿಳಿಸಿದರು.
ಹೆಬ್ರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಶಶಿಕಲಾ ಆರ್ ಪಿ, ರಾಜು ಪೂಜಾರಿ ಕುಚ್ಚೂರು, ವಸಂತ್ ಮಡಾಮಕ್ಕಿ, ಜಗದೀಶ ಹೇರಳೆ ನಾಡ್ಪಾಲು, ಸಾವಿತ್ರಿ ನಾಯ್ಕ್ ಚಾರ, ರಘುನಾಥ ಪೂಜಾರಿ ಮುನಿಯಾಲು, ಹೆಬ್ರಿ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಸದಾಶಿವ ಸೇರ್ವೇಗಾರ್, ಹೆಬ್ರಿ ಮೆಸ್ಕಾಂ ಸಹಾಯಕ ಎಂಜಿನಿಯರ್ ರಾಧಿಕಾ ಅಡಿಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವೀಚಾರಕಿ ವಸಂತಿ, ರೇವತಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಪ್ರಥ್ವಿರಾಜ್, ಆಹಾರ ನಿರೀಕ್ಷಕ ಗುರುಪ್ರಸಾದ್, ಹೆಬ್ರಿ ತಾಲ್ಲೂಕು ಪಂಚಾಯಿತಿ ಕಚೇರಿಯ ಲತಾ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯ ಶಾಂತಿ ಬೇಳಂಜೆ ಉಪಸ್ಥಿತರಿದ್ದರು. ಸದಾಶಿವ ಸೇರ್ವೇಗಾರ್ ಸ್ವಾಗತಿಸಿ ವಂದಿಸಿದರು.


