ಮುದ್ರಾಡಿ : ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಕಲ್ಪವೃಕ್ಷ ಇಕೋಕ್ಲಬ್ ಮತ್ತು ವಿಜ್ಞಾನ ಸಂಘದ ಸಹಯೋಗದೊಂದಿಗೆ ಜರುಗಿತು.
ಮನೆಯ ಪೋಷಕರ ಸಹಕಾರದೊಂದಿಗೆ ಮಕ್ಕಳು ವಿವಿಧ ತಿನಿಸುಗಳನ್ನು ಮಾಡಿಕೊಂಡು ಬಂದು ಪ್ರದರ್ಶನ ಮಾಡಿದರು. ಮತ್ತು ಅವುಗಳು ಆರೋಗ್ಯಕ್ಕೆ ಯಾವ ರೀತಿ ಉತ್ತಮ ಅದರ ಮಹತ್ವದ ಬಗ್ಗೆ ವಿವರಿಸಿದರು.
ಕಾರ್ಯಕ್ರಮವನ್ನು ಎಸ್ ಡಿಎಂಸಿ ಅಧ್ಯಕ್ಷ ಪ್ರಸನ್ನ ಕುಮಾರ್ ನೇಜಿನೆಟ್ಟು ಚೆನ್ನೆಮಣೆ ಆಡಿ ಉದ್ಘಾಟಿಸಿದರು. ಹಿರಿಯರಾದ ಗಣಪತಿ ಎಂ.ಆಟಿಡೊಂಜಿ ದಿನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಇಂದಿನ ಜೆಂಕ್ ಆಹಾರದಿಂದ ದೂರವಿದ್ದು ಆರೋಗ್ಯಕರವಾದ ಮನೆಯ ಆಹಾರ ಉಪಯೋಗಿಸಿದರೆ ನಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಸಾಧ್ಯ ಎಂದು ಹೇಳಿದರು.
ವಿಜ್ಞಾನ ಶಿಕ್ಷಕಿ ಸುಕೇತಾ ಜಗದೀಶ್ ಮಾತನಾಡಿ ಹಿಂದಿನ ಕಾಲದಲ್ಲಿ ಹಿರಿಯರು ಕೆಲವೊಂದು ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು. ಅದು ವೈಜ್ಞಾನಿಕ ವಾಗಿಯು ಸತ್ಯವಾಗಿತ್ತು ಎಂದು ಉದಾಹರಣೆ ನೀಡಿ ವಿವರಿಸಿದರು.
ಹಿರಿಯರಾದ ಗಣಪತಿ ಎಂ, ಮುದ್ರಾಡಿ ಕ್ಲಸ್ಟರ್ ನಿರ್ದೇಶಕ ರಾಘವೇಂದ್ರ ಆಚಾರ್ಯ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸುರೇಖಾ ಶೆಟ್ಟಿ, ಮುಖ್ಯ ಶಿಕ್ಷಕ ನಾರಾಯಣ, ಇಕೋಕ್ಲಬ್ ನೋಡೆಲ್ ಶಿಕ್ಷಕ ಶ್ರೀನಿವಾಸ ಭಂಡಾರಿ, ವಿಜ್ಞಾನ ಸಂಘದ ನೋಡೆಲ್ ಶಿಕ್ಷಕಿ ಸುಕೇತಾ ಜಗದೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅದಿತಿ ರಾವ್, ಅನ್ಸಿ, ಚಾರ್ವಿ, ಪ್ರತಿಜ್ಞಾ ಸ್ವಾಗತಿಸಿ ನಿರೂಪಿಸಿ ವಂದಿಸಿದರು.


