Wednesday, August 19, 2026
Homeಶಿವಪುರ ಗ್ರಾಮ ಪಂಚಾಯತ್‌ಪಾಂಡುಕಲ್ಲು ಸ್ವಯಂಭೂ ಶ್ರೀ ಕೋಟಿನಾಥೇಶ್ವರ ದೇವಾಲಯದ ನಾಗಬನದಲ್ಲಿ ನಾಗರ ಪಂಚಮಿ ಉತ್ಸವ

ಪಾಂಡುಕಲ್ಲು ಸ್ವಯಂಭೂ ಶ್ರೀ ಕೋಟಿನಾಥೇಶ್ವರ ದೇವಾಲಯದ ನಾಗಬನದಲ್ಲಿ ನಾಗರ ಪಂಚಮಿ ಉತ್ಸವ

ಶಿವಪುರ : ಶಿವಪುರ ಸಮೀಪದ ಸುಮಾರು 1 ಸಾವಿರ ವರ್ಷಗಳ ಇತಿಹಾಸವಿರುವ ಪಾಂಡುಕಲ್ಲು ಬಡ್ಕಿಲ್ಲಾಯ ಮನೆತನದ ಆಡಳಿತಕ್ಕೊಳಪಟ್ಟ ಸ್ವಯಂಭೂ ಶ್ರೀ ಕೋಟಿನಾಥೇಶ್ವರ ದೇವಾಲಯದ ನಾಗಬನದಲ್ಲಿ ನಾಗರ ಪಂಚಮಿ ಉತ್ಸವವು ಪೂರ್ವ ಶಿಷ್ಟ ಸಂಪ್ರದಾಯದಂತೆ ವಿಧಿವತ್ತಾಗಿ ನಡೆಯಿತು.

ಸರ್ತಿ ಅರ್ಚಕರಾದ ವ್ಯವಸ್ಥಾಪಕ ಶ್ರೀ ಶಂಕರ ಬಡ್ಕಿಲ್ಲಾಯ ಅವರ ಉಸ್ತುವಾರಿಕೆಯಲ್ಲಿ ನಾಗಾರಾಧನೆ ನಡೆಯಿತು.

ಬಡ್ಕಿಲ್ಲಾಯ ಕುಟುಂಬದ ಸದಸ್ಯರಲ್ಲದೆ ದೂರದ ಮಂಗಳೂರು ಉಡುಪಿ ಬ್ರಹ್ಮಾವರ ಮೊದಲಾದ ಕಡೆಯಿಂದ ಭಕ್ತರು ಆಗಮಿಸಿ ದೇವರಿಗೆ ತಮ್ಮ ಶ್ರದ್ಧಾ ಭಕ್ತಿಗಳನ್ನು ಸಮರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments