Google search engine
Home Uncategorized ಧರ್ಮಸ್ಥಳದ ಎಸ್‌ಐಟಿ ವರದಿ ಶೀಘ್ರ ಬಿಡುಗಡೆ ಮಾಡಿ:ಉಡುಪಿ ಜಿಲ್ಲಾ ಜನಜಾಗೃತಿ ಸಮಿತಿ ಒತ್ತಾಯ

ಧರ್ಮಸ್ಥಳದ ಎಸ್‌ಐಟಿ ವರದಿ ಶೀಘ್ರ ಬಿಡುಗಡೆ ಮಾಡಿ:ಉಡುಪಿ ಜಿಲ್ಲಾ ಜನಜಾಗೃತಿ ಸಮಿತಿ ಒತ್ತಾಯ

0

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ತನಿಖೆಯು ಮುಕ್ತಾಯಗೊಂಡಿದ್ದು ಶೀಘ್ರವಾಗಿ ತನಿಖಾ ವರದಿಯನ್ನು ಬಿಡುಗಡೆ ಮಾಡುವಂತೆ ಉಡುಪಿ ಜಿಲ್ಲಾ ಜನಜಾಗೃತಿ ಸಮಿತಿಯ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ ಒತ್ತಾಯ ಮಾಡಿದ್ದಾರೆ.

ತನಿಖೆ ಮುಕ್ತಾಯಗೊಂಡು ೯ ತಿಂಗಳು ಕಳೆದಿದೆ. ಮುಖ್ಯಮಂತ್ರಿಗಳು ಸರ್ಕಾರಕ್ಕೆ ಮತ್ತು ಪೊಲೀಸ್‌ ಇಲಾಖೆಗೆ ವರದಿಯನ್ನು ಬಹಿರಂಗ ಪಡಿಸುವಂತೆ ಆದೇಶಿಸಬೇಕು, ಶ್ರೀ ಕ್ಷೇತ್ರ ಧರ್ಮಸ್ಥಳದ ಕೋಟ್ಯಾಂತರ ಭಕ್ತರ ಭಾವನೆ, ಧಾರ್ಮಿಕ ನಂಬಿಕೆಯನ್ನು ಉಳಿಸಬೇಕಾಗಿದೆ ಎಂದು ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

ಎಸ್‌ಐಟಿ ತನಿಖೆಯಿಂದ ಧರ್ಮಸ್ಥಳವು ಸಂಪೂರ್ಣ ಪರಿಶುದ್ಧಗೊಂಡಿದೆ. ಬುರುಡೆ ಗ್ಯಾಂಗ್‌ ಸದಸ್ಯರು ಭೂಗತರಾಗಿದ್ದಾರೆ. ರಾಜ್ಯ ಹೈಕೋರ್ಟ್‌ ಬೇಡಿಕೆ ಕೂಡ ಆಗಿತ್ತು. ಶ್ರೀಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಘಟಕವು ಕೂಡ ಸರ್ಕಾರದ ಎಸ್‌ಐಟಿ ರಚನೆಯ ನಿರ್ಧಾರವನ್ನು ಶ್ಲಾಘೀಸಿತ್ತು. ಇದೀಗ ಅತೀ ಶೀಘ್ರವಾಗಿ ಎಸ್‌ಐಟಿ ವರದಿಯನ್ನು ಬಹಿರಂಗಪಡಿಸುವಂತೆ ಜನಜಾಗೃತಿ ಸಮಿತಿಯು ಒತ್ತಾಯಿಸಿದೆ.

LEAVE A REPLY

Please enter your comment!
Please enter your name here