Google search engine
Home ನಿಧನ ಸುದ್ದಿ ಹೆಬ್ರಿ ಮಲ್ಲಿಕಾ ಶೆಟ್ಟಿ ನಿಧನ

ಹೆಬ್ರಿ ಮಲ್ಲಿಕಾ ಶೆಟ್ಟಿ ನಿಧನ

0

ಹೆಬ್ರಿಯ ಪ್ರತಿಷ್ಠಿತ ಅನಂತ ಪದ್ಮನಾಭ (ಎಪಿಎಂ) ಸಮೂಹ ಸಂಸ್ಥೆಯ ಸ್ಥಾಪಕರಾಗಿದ್ದ ದಿ. ಸುಭೋದ್ ಬಲ್ಲಾಳ್ ಅವರ ಪುತ್ರಿ ಮಂಗಳೂರಿನ ಖ್ಯಾತ ವೈಧ್ಯ ಡಾ. ಸುಮಂತ್ ಶೆಟ್ಟಿ ಅವರ ಧರ್ಮಪತ್ನಿ ಮಲ್ಲಿಕಾ ಶೆಟ್ಟಿ (67) ಶುಕ್ರವಾರ ರಾತ್ರಿ 12:30 ಗಂಟೆಗೆ ನಿಧನರಾಗಿದ್ದಾರೆ.

ಮೃತರಿಗೆ ಪತಿ ಹಾಗೂ ಇಬ್ಬರು ಗಂಡು ಮಕ್ಕಳು ಹಾಗೂ ಸಹೋದರರಾದ ಹೆಬ್ರಿ ಪ್ರವೀಣ್ ಬಲ್ಲಾಳ್ ಹಾಗೂ ಪ್ರಸಾದ್ ಬಲ್ಲಾಳ್ ಮತ್ತು ಅಪಾರ ಬಂಧು ಬಳಗ ಇದ್ದಾರೆ. ಶನಿವಾರ ( ಇಂದು 12 ಗಂಟೆ ಬಳಿಕ ಹೆಬ್ರಿಯ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬಳಿಕ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯ ಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ, ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಕರ್ನಾಟಕ ಸರ್ಕಾರದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಹೆ ಮಣಿಪಾಲದ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here