ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಹರೀಶ್ ಪೂಜಾರಿ ಎಸ್ ಅವರಿಗೆ ಸಂಮಾನ.
ಪಡುಕುಡೂರು ( ಮುನಿಯಾಲು ) : ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಮತ್ತು ಉಡುಪಿ ಜಿಲ್ಲಾ ಉತ್ತಮ ಸಾಧಕ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಹರೀಶ್ ಪೂಜಾರಿ ಎಸ್ ಅವರಿಗೆ ಸಂಮಾನ ಕಾರ್ಯಕ್ರಮ ಸೋಮವಾರ ಪಡುಕುಡೂರು ಶಾಲೆಯಲ್ಲಿ ನಡೆಯಿತು.
ಪಡುಕುಡೂರು ಶೈಕ್ಷಣಿಕ ಸಂಸ್ಥೆಯನ್ನು ಸರ್ವರ ಸಹಕಾರದೊಂದಿಗೆ ಜನಮನ್ನಣೆಗೊಳಿಸಿ ದಾಖಲಾತಿ ಹೆಚ್ಚು ಮಾಡುವಲ್ಲಿ, ಶಾಲಾ ವಿದ್ಯಾರ್ಥಿಗಳ ವಿವಿಧ ಆಯಾಮಗಳ ಪ್ರತಿಭೆಗಳು ಕ್ಲಸ್ಟರ್,ತಾಲೂಕು,ಜಿಲ್ಲೆ,ವಿಭಾಗ ಮಟ್ಟಕ್ಕೂ ವಿಸ್ತರಿಸುವಲ್ಲಿ ಶ್ರಮವಹಿಸುತ್ತಿರುವ 2025-26 ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಸಾಧಕ ಶಿಕ್ಷಕ ಪುರಸ್ಕೃತರಾದ ಶಾಲಾ ಮುಖ್ಯೋಪಾಧ್ಯಾಯ ಹರೀಶ್ ಪೂಜಾರಿ.ಎಸ್ ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಲಾಯಿತು.
ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ದೊಂಡೇರಂಗಡಿ, ಕಾರ್ಯದರ್ಶಿ ಗೋಫಿನಾಥ್ ಭಟ್, ಪೂಜಾ ಶಂಕರ ಶೆಟ್ಟಿ, ಭುಜಂಗ ಶೆಟ್ಟಿ, ಹರೀಶ್ ಶೆಟ್ಟಿ ಪಡುಪರ್ಕಳ , ಎಸ್ ಡಿಎಂಸಿ ಅಧ್ಯಕ್ಷ ರವಿಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ , ಎಸ್ ಡಿಎಂಸಿ ಸದಸ್ಯರು, ಶಿಕ್ಷಕ ವೃಂದದವರು, ಶಾಲಾ ವಿದ್ಯಾರ್ಥಿಗಳು, ಅಡುಗೆಯವರು ಉಪಸ್ಥಿತರಿದ್ದರು.



