ಶಿಕ್ಷಕರಿಗೆ ಎಲ್ಲಾ ಮಕ್ಕಳು ತಮ್ಮ ಮಕ್ಕಳೇ : ಎಚ್.ನಾಗರಾಜ್ ಶೆಟ್ಟಿ.
ಹೆಬ್ರಿ : ಎಸ್. ಆರ್. ಪಬ್ಲಿಕ್ ಸ್ಕೂಲ್ ನಲ್ಲಿ ಗುರುವಾರ “ಎಸ್.ಆರ್.ಬಾಲ ಉತ್ಸವ” ಕಾರ್ಯಕ್ರಮ ನಡೆಯಿತು. ಶಿಕ್ಷಕರಿಗೆ ಎಲ್ಲಾ ಮಕ್ಕಳು ತಮ್ಮ ಮಕ್ಕಳೇ . ಎಲ್ಲಾ ಮಕ್ಕಳು ಕೂಡ ನಮ್ಮ ಶಿಕ್ಷಕರಿಗೆ ತಮ್ಮ ಸ್ವಂತ ಮಕ್ಕಳ ಹಾಗೆ ಎಲ್ಲರನ್ನೂ ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೆ. ಎಲ್ಲಾ ಮಕ್ಕಳಿಗೂ ಸಮಾನವಾದ ಪ್ರಾಶಸ್ತ್ಯ ನೀಡಿ. ಎಲ್ಲಾ ಮಕ್ಕಳಿಗೂ ಅವಕಾಶ ದೊರೆಯುವಂತಾಗಲಿ ಎಂದು ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ್ ಶೆಟ್ಟಿ ಹೇಳಿದರು.ಅವರು ಎಸ್.ಆರ್ ಪಬ್ಲಿಕ್ ಸ್ಕೂಲ್ (ಕೇಂದ್ರೀಯ ಪಠ್ಯಕ್ರಮ) ಪ್ರಿಕೆಜಿಯಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ “ಎಸ್.ಆರ್ ಬಾಲ ಉತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಮಾತನಾಡಿ, ಪುಟಾಣಿ ಮಕ್ಕಳ ಪ್ರತಿಭೆಗಳು ಪ್ರತಿಯೊಬ್ಬರ ಮನಸ್ಸನ್ನು ಆಕರ್ಷಿಸುತ್ತದೆ. ಇಂದು ಎಲ್ಲರೂ ಸಂಭ್ರಮಿಸಿ, ನಿಮಗಾಗಿ ಆಯೋಜಿಸಿದ ಕಾರ್ಯಕ್ರಮ ಎಲ್ಲರೂ ಭಾಗವಹಿಸಿ ಎಲ್ಲರೂ ಅವಕಾಶವನ್ನು ಬಳಸಿಕೊಳ್ಳಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರ ಭಗವತಿ, ಉಪಪ್ರಾಂಶುಪಾಲ ದೀಪಕ್ ಎನ್, ಕೋಓರ್ಡಿನೇಟರ್ ಸುಜಾತ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಮ್ಯಾಜಿಕ್, ಡಾನ್ಸ್, ಸ್ಕಿಟ್, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭಾ ಪ್ರದರ್ಶನವು ನಡೆಯಿತು.
ವಿದ್ಯಾರ್ಥಿಗಳಾದ ಬ್ರಾಹ್ಮಿ ಮತ್ತು ಸಾನ್ವಿ ಜಿ ನಿರೂಪಿಸಿ, ತ್ರಿಶಾನ್ ಎಸ್ ಶೆಟ್ಟಿ ಸ್ವಾಗತಿಸಿ, ದಕ್ಷ್ ಪಿ ಆಚಾರ್ಯ ವಂದಿಸಿದರು.



