ನಿಧನ:ಮಲ್ಲಿಕಾ ಶೆಟ್ಟಿ
ಹೆಬ್ರಿ : ಹೆಬ್ರಿಯ ಪ್ರತಿಷ್ಠಿತ ಅನಂತ ಪದ್ಮನಾಭ (ಎಪಿಎಂ) ಸಮೂಹ ಸಂಸ್ಥೆಯ ಸ್ಥಾಪಕರಾಗಿದ್ದ ದಿ. ಸುಭೋದ್ ಬಲ್ಲಾಳ್ ಅವರ ಪುತ್ರಿ ಮಂಗಳೂರಿನ ಖ್ಯಾತ ವೈಧ್ಯ ಡಾ. ಸುಮಂತ್ ಶೆಟ್ಟಿ ಅವರ ಧರ್ಮಪತ್ನಿ ಮಲ್ಲಿಕಾ ಶೆಟ್ಟಿ (೬೭) ಶುಕ್ರವಾರ ರಾತ್ರಿ 12:30 ಗಂಟೆಗೆ ನಿಧನರಾಗಿದ್ದಾರೆ. ಮೃತರಿಗೆ ಪತಿ ಹಾಗೂ ಇಬ್ಬರು ಗಂಡು ಮಕ್ಕಳು ಹಾಗೂ ಸಹೋದರರಾದ ಹೆಬ್ರಿ ಪ್ರವೀಣ್ ಬಲ್ಲಾಳ್ ಹಾಗೂ ಪ್ರಸಾದ್ ಬಲ್ಲಾಳ್ ಮತ್ತು ಅಪಾರ ಬಂಧು ಬಳಗ ಇದ್ದಾರೆ. ಶನಿವಾರ ( ಇಂದು ೧೨ ಗಂಟೆ ಬಳಿಕ ಹೆಬ್ರಿಯ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬಳಿಕ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.







