Google search engine

EDITOR PICKS

POPULAR POSTS

ABOUT US

" ನಮ್ಮ ಆಶಯ" ಆತ್ಮೀಯರೇ...., ಹೆಬ್ರಿಗೊಂದು ನೇರ ನಿಖರ ನಿರಂತರ ಸುದ್ದಿಗಳನ್ನು, ವಾಸ್ತವ ವಿಷಯ ವಿಚಾರಗಳನ್ನು ಸಮಾಜದ ಮುಂದಿಡುವ ಮಾಧ್ಯಮದ ಅಗತ್ಯತೆಯನ್ನು ಮನಗಂಡು, ಸಮಾಜದಲ್ಲಿ ಕ್ರೀಯಾಶೀಲವಾಗಿರಬೇಕು ಎಂಬ ಆಶಯದೊಂದಿಗೆ " ಹೆಬ್ರಿ ನ್ಯೂಸ್‌ " . ಎಂಬ ವೆಬ್‌ ನ್ಯೂಸ್‌ ತಾಣವನ್ನು ವಿನ್ಯಾಸಗೊಳಿಸಿ ತಮ್ಮ ಮುಂದಿಡುತ್ತಿದ್ದೇವೆ. ಹೊಸ ಯೋಚನೆ ಯೋಜನೆ ಮತ್ತು ವಿನೂತನ ಕಾರ್ಯ ಯೋಜನೆಯ ಮೂಲಕ ತಮ್ಮೇಲ್ಲರ ಮುಂದೆ ಬರುತ್ತಿದ್ದೇವೆ. ಹೆಬ್ರಿ ತಾಲ್ಲೂಕಿನ ಮತ್ತು ಪರಿಸರದ ಸುದ್ದಿ ಮಾಹಿತಿಗಳನ್ನು ತಮಗೆ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ. ಸ್ಥಳೀಯ ಸುದ್ದಿಗಳ ಜೊತೆಗೆ ವಿವಿಧ ವಿದ್ಯಮಾನಗಳನ್ನೂ ನಿಮ್ಮೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇವೆ. ಅದರೊಂದಿಗೆ ನಮ್ಮ ಹೆಬ್ರಿಯ ಇತಿಹಾಸ, ಸಂಸ್ಕೃತಿ, ಆಚರಣೆಯ ಭವ್ಯ ಪರಂಪರೆ, ನಮ್ಮೂರಿನ ಯುವ ಪ್ರತಿಭೆಗಳ ಪರಿಚಯ ಪರಿಚಯವನ್ನು ಅನಾವರಣಗೊಳಿಸುತ್ತ, ಸಾಧಕರನ್ನು ಜಗತ್ತಿಗೆ ಪರಿಚಯಿಸುತ್ತ ತಮ್ಮೇಲ್ಲರ ಅಪೇಕ್ಷೆಯಂತೆ ಸುದ್ದಿ ಸಮಾಚಾರವನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. " ನೇರ ನಿಖರ ನಿರಂತರ ಸುದ್ದಿಗಳಿಗಾಗಿ " ಎಂಬ ಆಶಯದೊಂದಿಗೆ ಹೆಬ್ರಿ ತಾಲ್ಲೂಕಿನ ಪ್ರತಿ ಗ್ರಾಮಗಳ ಮತ್ತು ಹೆಬ್ರಿ ತಾಲ್ಲೂಕು ಪರಿಸರದ ಸುದ್ದಿಗಳನ್ನು ಅತ್ಯಂತ ವಿಶ್ವಾಸಾರ್ಹತೆಯಲ್ಲಿ ಪಸರಿಸಲಿದ್ದೇವೆ. ದೇಶ ವಿದೇಶಗಳಲ್ಲಿ ನೆಲೆಸಿರುವ ನಮ್ಮ ಹೆಬ್ರಿಯ ಬಂಧುಗಳಿಗೆ ತಮ್ಮೂರಿನ ವಿದ್ಯಮಾನಗಳು, ಮಾಹಿತಿಯನ್ನು ನೀಡುತ್ತ ತಮ್ಮೂರನ್ನು ಸದಾಕಾಲವೂ ನೆನಪಿನಲ್ಲಿಟ್ಟು ಜನಮನ ಬೆಸೆಯುವ ವೆಬ್‌ ನ್ಯೂಸ್‌ ಜಾಲವನ್ನು ಬೆಳೆಸುವುದು ನಮ್ಮ ಧ್ಯೇಯವಾಗಿದೆ. ನಮ್ಮೂರಿನ ಮಾಹಿತಿ ವಿನಿಮಯ ಮತ್ತು ಸಂಪರ್ಕದ ಕೊಂಡಿಯಾಗಿ "ಹೆಬ್ರಿ ನ್ಯೂಸ್‌ " ಕಾರ್ಯವನ್ನು ಮಾಡಲಿದೆ. ನಮಗೆ ಮಾಹಿತಿ ನೀಡಿ : " ಹೆಬ್ರಿ ನ್ಯೂಸ್‌ " ನಮ್ಮ ಸುದ್ದಿ ಜಾಲಕ್ಕೆ ಓದುಗರಾದ ತಾವೆಲ್ಲರೇ ನಮಗೆ ಪ್ರಮುಖ ಆಧಾರ. ತಮ್ಮೂರಿನಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಸರ್ಕಾರಿ ಇಲಾಖೆಗಳು ಸೇರಿ ವಿವಿಧ ಸುದ್ದಿ ಸಮಾಚಾರಗಳನ್ನು ಸಚಿತ್ರವಾಗಿ ಬರೆದು ನಮಗೆ ನಮಗೆ ಕಳುಹಿಸಿ. ಅದನ್ನು ನಾವು ಬಿತ್ತರಿಸುವ ಕಾರ್ಯವನ್ನು ಮಾಡುತ್ತೇವೆ. ತಮ್ಮೂರಿನ ಸಮಸ್ಯೆಗಳಿಗೂ ಧ್ವನಿಯಾಗುತ್ತೇವೆ. ಆಳುವವರ ಗಮನ ಸೆಳೆದು ಸಮಸ್ಯೆಗಳ ಪರಿಹಾರಕ್ಕೂ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ. ನಿಮ್ಮೇಲ್ಲರ ಬೆಂಬಲ ಸದಾ ಇರಲಿ ಹೆಬ್ರಿ ತಾಲ್ಲೂಕಿನ ಸಮಗ್ರ ಸುದ್ದಿ ಮಾಹಿತಿಯನ್ನು ನೀಡುವ ನಮ್ಮ ಆಶಯಕ್ಕೆ ತಮ್ಮೆಲ್ಲರ ಬೆಂಬಲ ಸಹಕಾರವನ್ನು ಯಾಚಿಸುತ್ತೇವೆ. ನಮ್ಮ ಮಾಧ್ಯಮ " ಹೆಬ್ರಿ ನ್ಯೂಸ್‌ " ಯಶಸ್ವಿಯಾಗಿ ಮುನ್ನಡೆಯಲು ಜಾಹೀರಾತು ಅತೀ ಪ್ರಾಮುಖ್ಯವಾಗಿದೆ. ಸಭೆ ಸಮಾರಂಭಗಳು, ಮದುವೆ, ವಿವಾಹ ವಾರ್ಷಿಕೋತ್ಸವ, ಹುಟ್ಟುಹಬ್ಬ, ಶಾಲೆ ಕಾಲೇಜು, ಸಂಘಸಂಸ್ಥೆಗಳ ವಾರ್ಷಿಕೋತ್ಸವ, ವಿವಿಧ ಕಾರ್ಯಕ್ರಮಗಳು, ವ್ಯಾಪಾರ, ವ್ಯವಹಾರ, ಉದ್ಯಮಗಳ ಜಾಹೀರಾತುಗಳನ್ನು ನಮಗೆ ನೀಡಿ " ಹೆಬ್ರಿ ನ್ಯೂಸ್‌ " ವೆಬ್‌ ತಾಣವನ್ನು ಬೆಳೆಸಿ ಮುನ್ನಡೆಸುವಂತೆ ತಮ್ಮಲ್ಲಿ ಮನವಿ ಮಾಡುತ್ತೇವೆ. ತಮ್ಮ ಸಹಕಾರ ಬೆಂಬಲದ ನಿರೀಕ್ಷೆಯಲ್ಲಿ.... ಹೆಬ್ರಿ ನ್ಯೂಸ್‌ ಟೀಮ್‌ ಸುದ್ದಿ ಮಾಹಿತಿ ಕಳುಹಿಸಲು ಇ ಮೇಲ್‌ ಐಡಿ ವಾಟ್ಸಾಪ್‌ ನಂಬರ್‌ :

Contact us: contact@yoursite.com

FOLLOW US

© Newspaper WordPress Theme by TagDiv