ಶಿಕ್ಷಕ ವೃತ್ತಿ ಪವಿತ್ರವಾದುದು : ಪ್ರಬುದ್ಧ ಸಮಾಜ ನಿರ್ಮಾಣ ಮಾಡುವ ರೂವಾರಿಗಳು ಶಿಕ್ಷಕರು : ಹೆಬ್ರಿ ಗುರುದಾಸ ಶೆಣೈ
ಹೆಬ್ರಿ : ಶಿಕ್ಷಕರ ವೃತ್ತಿ ಪವಿತ್ರವಾದುದು. ಪ್ರಬುದ್ಧ ಸಮಾಜ ನಿರ್ಮಾಣ ಮಾಡುವ ರೂವಾರಿಗಳು ಶಿಕ್ಷಕರು ನಿಮ್ಮನ್ನು ವೃತ್ತಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ವಿದ್ಯಾಭಾರತಿಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ. ಶಿಕ್ಷಕರು ಸಮಾಜದ ಆಸ್ತಿಯಾಗಬೇಕು ವಿದ್ಯಾಭಾರತಿ ಕರ್ನಾಟಕದ ಆಶಯ ಕೂಡ ಅದೇ ಆಗಿದೆ ಎಂದು ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಗುರುದಾಸ ಶೆಣೈ ಹೆಬ್ರಿ ಹೇಳಿದರು.
ಅವರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸುವ ಪಿ.ಆರ್.ಎನ್. ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ವಿಜ್ಞಾನ ಮೇಳ, ಗಣಿತ ವೇದಗಣಿತ, ಯೋಗ, ಸಂಸ್ಕೃತಿ ಜ್ಞಾನ ಮಹೋತ್ಸವ ಸ್ಪರ್ಧೆ ಬಗ್ಗೆ ನಡೆದ ಪೂರ್ವ ಸಿದ್ಧತಾ ಬೈಠಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಪಾಂಡುರಂಗ ಪೈ ಸಿದ್ಧಾಪುರ, ಅಮೃತ ಭಾರತಿ ಟ್ರಸ್ಟ್ ಸದಸ್ಯ ಶೈಲೇಶ್ ಕಿಣಿ ಹೆಬ್ರಿ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಾರೀರಿಕ ಪ್ರಮುಖ್ ವಿಜಯ ಕುಮಾರ ಶೆಟ್ಟಿ, ಜಿಲ್ಲಾ ಗಣಿತ ಪ್ರಮುಖ್ ಜ್ಯೋತಿ ಸಿದ್ಧಾಪುರ,
ಅಮೃತ ಭಾರತಿ ವಿದ್ಯಾಲಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಅಮೃತ ಭಾರತಿ ವಿದ್ಯಾಕೇಂದ್ರದ ಪ್ರಾಂಶುಪಾಲ ಅರುಣ್ ಕುಮಾರ್ ಎಚ್ .ವೈ. ಉಪಸ್ಥಿತರಿದ್ದರು. ಬೈಠಕ್ ನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಚೇರ್ಕಾಡಿಯ ವಿಜ್ಞಾನ ಮಾತಾಜಿ ಅವರನ್ನು ಪ್ರಶ್ಮಿತಾ ಬ್ರಹ್ಮಾವರ ಜಿಲ್ಲಾ ವಿಜ್ಞಾನ ಪ್ರಮುಖ್ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು .
ಜಿಲ್ಲಾ ಮಟ್ಟದ ವಿಜ್ಞಾನ ,ಗಣಿತ , ವೇದಗಣಿತ , ಸಂಸ್ಕೃತಿ ಜ್ಞಾನ ಮಹೋತ್ಸವ ಶಿಶುವರ್ಗ ಮತ್ತು ಬಾಲವರ್ಗ ಸ್ಪರ್ಧೆಯು ಆಗಸ್ಟ್ 10 ರಂದು ಹೆಬ್ರಿ ಪಿ.ಆರ್.ಎನ್ .ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಜಿಲ್ಲಾ ಮಟ್ಟದ ಕಿಶೋರ್ ವರ್ಗದ ಸ್ಪರ್ಧೆಯು ಆಗಸ್ಟ್ 19 ಸೂರ್ಯ ಚೈತನ್ಯ ಗ್ಲೋಬಲ್ ಆಕಾಡೆಮಿ ಸ್ಕೂಲ್ ಕುತ್ಯಾರಿನಲ್ಲಿ ನಡೆಯಲಿದೆ.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶಕುಂತಲಾ ವಿಜ್ಞಾನ, ಗಣಿತ, ವೇದಗಣಿತ ಮೇಳದ ಮಾಹಿತಿಯನ್ನು, ಜಿಲ್ಲಾ ಸಂಸ್ಕೃತಿ ಜ್ಞಾನ ಪ್ರಮುಖ್ ಜ್ಯೋತಿ ಎಳ್ಳಾರೆ ಸಂಸ್ಕೃತಿ ಜ್ಞಾನ ಮಹೋತ್ಸವದ ಮಾಹಿತಿಯನ್ನು ನೀಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ ಪ್ರಾಸ್ತಾವಿಕ ಮಾತನಾಡಿ ಬೈಠಕ್ ನಿರ್ವಹಿಸಿದರು.


