Sunday, August 9, 2026
Homeಹೆಬ್ರಿದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೀಳ್ಕೊಡುಗೆ : ಸನ್ಮಾನ

ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೀಳ್ಕೊಡುಗೆ : ಸನ್ಮಾನ

ದೊಂಡೆರಂಗಡಿ : ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ದೊಂಡೆರಂಗಡಿ ಶ್ರೀ ರಾಮ ಮಂದಿರದಲ್ಲಿ ನಡೆಯಿತು. 

ಕುಕ್ಕುಜೆ, ಕಡ್ತಲ, ಎಳ್ಳಾರೆ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ವೈದ್ಯಾಧಿಕಾರಿ ಡಾ.ಚಂದ್ರಿಕಾ ಕಿಣಿ, ಪ್ರಯೋಗಶಾಲಾ ಅಧಿಕಾರಿ ಸತೀಶ್ ಕಾಮತ್ ಮತ್ತು ಶುಶ್ರೂಷಣಾಧಿಕಾರಿ ಸುಲೋಚನಾ ಕೆ. ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.

ನಿವೃತ್ತಿ ಹೊಂದಿದ ಸುರಕ್ಷಾಧಿಕಾರಿ ಪಾಪಕ್ಕ ಟಿ., ಕೇಂದ್ರದ ಉದ್ಯೋಗಿ ಪಾರ್ವತಿ ಮತ್ತು ಆಶಾ ಕಾರ್ಯಕರ್ತೆ ಬೇಬಿ ಎಳ್ಳಾರೆ ಅವರಿಗೆ ಗೌರವದ ಸನ್ಮಾನ  ನೀಡಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವಿಶ್ವನಾಥ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಡಿ. ಲಕ್ಷ್ಮಣ್, ಶ್ರೀನಿವಾಸ್ ಭಟ್, ರಾಘವ ದೇವಾಡಿಗ ಉಪಸ್ಥಿತರಿದ್ದರು.

ಅಜಿತ್ ದೇವಾಡಿಗ ಸ್ವಾಗತಿಸಿ, ಕೃತಜ್ಞತಾ ಸಮರ್ಪಣೆಯನ್ನು ವಿನಯ್ ಆರ್. ಭಟ್ ನೆರವೇರಿಸಿ, ಪ್ರಸನ್ನ ಶೆಟ್ಟಿಗಾರ್ ನಿರೂಪಿಸಿದರು.

ಸಂಪತ್ ಪೂಜಾರಿ, ಹರೀಶ್ ದುಗ್ಗನ್ ಬೆಟ್ಟು, ರಾಘವ ಕೆ, ಜಗದೀಶ್ ಹೆಗ್ದೆ, ಸುನಿಲ್ ಹೆಗ್ಡೆ, ದೀಕ್ಷಿತ್ ಶೆಟ್ಟಿ, ಪ್ರಸನ್ನ ದೇವಾಡಿಗ, ಶಶಿಕಲಾ ಭಟ್, ರೇಖಾ ಮತ್ತಿತ್ತರರು ಸಹಕರಿಸಿದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments