ಕಡ್ತಲ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡ್ತಲ ಇದರ ಮಹಾಸಭೆ ಹಾಗೂ 39ನೇ ವರ್ಷದ ಕಾರ್ಯಕ್ರಮದ ಪೂರ್ವಭಾವಿ ಸಭೆ ಕಡ್ತಲ ಪಂಚಾಯತ್ ವಠಾರದಲ್ಲಿ ಸಮಿತಿ ಅಧ್ಯಕ್ಷರಾದ ಗೋಪಾಲ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತುತ ವರ್ಷದ ಗಣೇಶೋತ್ಸವವನ್ನು ಈ ಹಿಂದಿನಂತೆ 2ದಿನ ಊರ ಪರವೂರ ಭಕ್ತಾಭಿಮಾನಿಗಳ ಸಹಕಾರದಲ್ಲಿ, ಭಕ್ತಿ ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸುವ ಬಗ್ಗೆ ತೀರ್ಮಾನಿಸಲಾಯಿತು.
2026-28ನೇ ಸಾಲಿನ ಅಧ್ಯಕ್ಷರಾಗಿ ಯೋಗ ಸಾಧಕ, ಹಲವಾರು ಸಂಘಟನೆಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಶೇಖರ್ ಕಡ್ತಲ ಸರ್ವಾನುಮತದಿಂದ ಆಯ್ಕೆಯಾದರು.
ಕಾರ್ಯದರ್ಶಿ ಸಂತೋಷ್ ಆಚಾರ್ಯ, ಕೋಶಾಧಿಕಾರಿ ರವಿರಾಜ್ ನಾಯಕ್, ಉಪಾಧ್ಯಕ್ಷರು ಕರುಣಾಕರ ಹೆಗ್ಡೆ ಮತ್ತು ಶೋಭಾ ಶೆಟ್ಟಿ,ಜೊತೆ ಕಾರ್ಯದರ್ಶಿ ರಾಘವೇಂದ್ರ ಮಠದಬೆಟ್ಟು ಮತ್ತು ಕೌಶಿಕ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಸುಮನ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಮನೋಹರ ಪೂಜಾರಿ ಆಯ್ಕೆಯಾದರು.


