ಬೆಳ್ವೆ : ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಸೇವಾ ಮನೋಭಾವನೆಯೊಂದಿಗೆ ಹಲವು ಸಾಮಾಜಮುಖಿ ಸೇವಾ ಕಾರ್ಯಕ್ರಮಗಳ ಮೂಲಕ ಶ್ರೇಷ್ಠ ಸ್ಥಾನಮಾನದೊಂದಿಗೆ ಗುರುತಿಸಿಕೊಂಡಿರುವುದು ಪ್ರಶಂಸನೀಯ ಎಂದು ಲಯನ್ಸ್ ಜಿಲ್ಲೆ ೩೧೭ ಸಿ ನಿಕಟ ಪೂರ್ವ ಗರ‍್ನರ್ ಸಪ್ನಾ ಸುರೇಶ್ ಹೇಳಿದರು. ಅವರು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ೨೦೨೬-೨೭ ನೇ ಸಾಲಿನ ನೂತನ ಪದಾಧಿಕಾರಿಗಳಿಗೆÀ ಪದಪ್ರಧಾನ ನೆರವೇರಿಸಿ ಭಾನುವಾರ ಮಾತನಾಡಿದರು.
ರೋಟೇರಿಯನ್ ಡಾ ಸುರೇಶ್ ಶೆಣೈ (ಅರ್ಥೋ), ಲಯನ್ಸ್ ಜಿಲ್ಲಾ ಟೀಮ್ ಮುಖಂಡ ಅರುಣಕುಮಾರ್ ಹೆಗ್ಡೆ, ರೀಜನ್ ಚೇಯರ್‌ಪರ್ಸನ್ ಸರಸ್ವತಿ ಪುತ್ರನ್, ಕಾರ್ಯದರ್ಶಿ ಆಶಾ ಶೆಟ್ಟಿ, ಜೋನ್ ಚೇಯರ್ ಪರ್ಸನ್ ಬಿ.ಎಸ್.ವಿಶ್ವನಾಥ, ಎಕ್ಸಟೆಶನ್ ಚೇಯರ್ ಪರ್ಸನ್ ಸುದರ್ಶನ ನಾಯಕ್, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಚಂದ್ರಿಕಾ ಬೆಳ್ವೆ,ಕಾರ್ಯದರ್ಶಿ ಶಾಲಿನಿ ಪ್ರೇಮ್‌ಕುಮಾರ್ ಅಲ್ಬಾಡಿ,ಕೋಶಾಧಿಕಾರಿ ಭಾರ್ಗವಿ ಪಿ ಭಟ್ ಗೋಳಿಯಂಗಡಿ,ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಅಣ್ಣಯ್ಯ ಶೆಟ್ಟಿ, ಕಾರ್ಯದರ್ಶಿ ಕೆ.ಸಂಜೀವ ಆರ್ಡಿ,ಕೋಶಾಧಿಕಾರಿ ಲ.ಬಾಲಮುರಲಿಕೃಷ್ಣ ,ಸ್ಥಾಪಾಕಾಧ್ಯಕ್ಷ ಬಿ ರಾಜೇಂದ್ರ ಕಿಣಿ ಬೆಳ್ವೆ, ಮಾಜಿ ಅಧ್ಯಕ್ಷರಾದ ಬಿ ಸತೀಶ್ ಕಿಣಿ ಬೆಳ್ವೆ,ಎಸ್ ಜಯರಾಮ ಶೆಟ್ಟಿ ಸರ‍್ಗೋಳಿ,ಎಚ್ ವಸಂತಕುಮಾರ್ ಶೆಟ್ಟಿ ಬೆಳ್ವೆ,ವೈಪಟ್ಟಾಭಿರಾಮ್ ಭಟ್ ಮರೂರು,ಪದಾಧಿಕಾರಿ ಮುಸ್ತಾಕ್ ಅಹಮ್ಮದ್ ಬೆಳ್ವೆ,ಉಷಾ ಪ್ರಕಾಶ್ ಶೆಟ್ಟಿ,ಬಾಬು ಶೆಟ್ಟಿ ಜಗ್ಲುಗುಡ್ಡೆ,ಬಿ.ಹರೀಶ್ ಕಿಣಿ ಬೆಳ್ವೆ,ಜಯಪ್ರಕಾಶ್ ಶೆಟ್ಟಿ ಬೆಳ್ವೆ, ಜಯಪ್ರಕಾಶ್ ಶೆಟ್ಟಿ ಗೋಳಿಯಂಗಡಿ,ಕೀರ್ತಿಕುಮಾರ್ ಶೆಟ್ಟಿ,ಎ.ವಸಂತಕುಮಾರ್ ಶೆಟ್ಟಿ ಅಲ್ಬಾಡಿ,ಉದಯ ಜೋಗಿ ಗೋಳಿಯಂಗಡಿ,ಸತೀಶ್ ಆಚಾರ್ಯ ಅಂಸಾಡಿ,ಸAತೋಷ ಶೆಟ್ಟಿ ಗೋಳಿಯಂಗಡಿ,ಲಿಯೋ ಕ್ಲಬ್ ಯುವಶಕ್ತಿ ಅಧ್ಯಕ್ಷ ಆಕಾಶ್ ಹೆಗ್ಡೆ,ಕಾರ್ಯದರ್ಶಿ ಪ್ರಜ್ಞಾ,ಕೋಶಾಧಿಕಾರಿ ಕಾರ್ತೀಕ್,ಲಿಯೋ ಕ್ಲಬ್ ಯುವಧ್ವನಿ ಅಧ್ಯಕ್ಷ ದರ್ಶನ್,ಕಾರ್ಯದರ್ಶಿ ನಿಧಿ ಶೆಟ್ಟಿ,ಕೋಶಾಧಿಕಾರಿ ಸುಶ್ಮೀತಾ ಉಪಸ್ಥಿತರಿದ್ದರು.
ಡಾ ಸುರೇಶ್ ಶೆಣೈ ಆಶಯ ಭಾಷಣ ಮಾಡಿದರು, ಲಯನ್ಸ್ ಜಿಲ್ಲೆ ನಿಕಟ ಪೂರ್ವ ಗರ‍್ನರ್ ಸಪ್ನಾ ಸುರೇಶ್, ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಲ.ಎಮ್ ಜೆಎಫ್ ಅಣ್ಣಯ್ಯ ಶೆಟ್ಟಿ, ಕಾರ್ಯದರ್ಶಿ ಲ.ಕೆ.ಸಂಜೀವ ಆರ್ಡಿ,ಕೋಶಾಧಿಕಾರಿ ಲ.ಬಾಲಮುರಲಿಕೃಷ್ಣ ಇವರುಗಳನ್ನು ಸನ್ಮಾನಿಸಲಾಯಿತು. ಆರತಿ ಗುಮ್ಮೋಲ ನೂತನ ಸದಸ್ಯೆಯಾಗಿ ಬರ ಮಾಡಿಕೊಳ್ಳಲಾಯಿತು.ಲಯನ್ಸ್ ಸೇವಾ ಕಾರ್ಯಕ್ರಮದ ಪ್ರಯುಕ್ತ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಆರ್ಥಿಕ ನೆರವು ನೀಡಲಾಯಿತು.
ಅಣ್ಣಯ್ಯ ಶೆಟ್ಟಿ ಸ್ವಾಗತಿಸಿದರು.ಭಾರ್ಗವಿ ಭಟ್ ಗೋಳಿಯಂಗಡಿ ಪ್ರಾರ್ಥಿಸಿದರು. ಎಚ್ ವಸಂತಕುಮಾರ್ ಶೆಟ್ಟಿ ಬೆಳ್ವೆ ಧ್ವಜ ವಂದನೆ ಸಲ್ಲಿಸಿದರು, ಬಿ.ಗೋಕುಲ್ ಕಿಣಿ ಬೆಳ್ವೆ ನೀತಿ ಸಂಹೀತೆ ಭೋಧಿಸಿದರು. ವೈ ಪಟ್ಟಾಭಿರಾಮ್ ಭಟ್ ಮರೂರು, ಮುಸ್ತಾಕ್ ಅಹಮ್ಮದ್ ಬೆಳ್ವೆ,ಬಿ.ವಿನೋಧ ಕಿಣಿ ಬೆಳ್ವೆ, ಲ.ಉಷಾ ಪ್ರಕಾಶ್ ಶೆಟ್ಟಿ,ತೀರ್ಥಕಲಾ ಪರಿಚಯಿಸಿದರು.ಜತೆ ಕಾರ್ಯದರ್ಶಿ. ಕೀರ್ತಿಕುಮಾರ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಶಾಲಿನಿ ಪ್ರೇಮ್‌ಕುಮಾರ್ ಅಲ್ಬಾಡಿ ವಂದಿಸಿದರು.


