ಬೆಳ್ವೆ : ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್ ಬೆಳ್ವೆ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ಶುಕುರ್ ಬೆಳ್ವೆ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಪೀರು ಸಾಹೇಬ್ ಉಡುಪಿ, ಪ್ರದಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ರಫೀಕ್ ಅಜೆಕಾರು , ಕೋಶಾಧಿಕಾರಿಯಾಗಿ ಮೊಹಮ್ಮದ್ ಆಸೀಫ್ ಅಲ್ಬಾಡಿ, ಜೊತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಇಲ್ಯಾಸ್ ಬೆಳ್ವೆ ಆಯ್ಕೆ ಯಾಗಿದ್ದಾರೆ.
ಟ್ರಸ್ಟ್ ನ ಸರ್ವ ಟ್ರಸ್ಟಿಗಳ ವಾರ್ಷಿಕ ಸಭೆಯು ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿದ್ದರು. ಟ್ರಸ್ಟಿಗಳಾದ ನಝೀರ್ ಶಾ, ಇಲ್ಯಾಸ್ ಬೆಳ್ವೆ , ಮೊಹಮ್ಮದ್ ರೆಯಾನ್ , ಫೀರು ಸಾಹೇಬ್ ಉಪಸ್ಥಿರಿದರು.ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಮೊಹಮ್ಮದ್ ರೇಯಾನ್ ಕಿರಾತ್ ಪಠಿಸಿದರು.ಟ್ರಸ್ಟಿ ಅರಾಫತ್ ಅಲ್ಬಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಮೊಹಮ್ಮದ್ ಆಸೀಫ್ ವರದಿ ಮಾಡಿಸಿದರು. ಉಪಾಧ್ಯಕ್ಷ ಅಬ್ದುಲ್ ಶುಕುರ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




