Wednesday, August 19, 2026
Homeಹೆಬ್ರಿಹೆಬ್ರಿಯಲ್ಲಿ ಆಗಸ್ಟ್‌ 15 ಸ್ವಯಂಪ್ರೇರಿತ ರಕ್ತದಾನ ಶಿಬಿರ.

ಹೆಬ್ರಿಯಲ್ಲಿ ಆಗಸ್ಟ್‌ 15 ಸ್ವಯಂಪ್ರೇರಿತ ರಕ್ತದಾನ ಶಿಬಿರ.

ಹೆಬ್ರಿ : ವಿಶ್ವ ಹಿಂದು ಪರಿಷದ್‌, ಬಜರಂಗದಳ ಹೆಬ್ರಿ ವಲಯ ಮತ್ತು ರಕ್ತನಿಧಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ ಇವರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಗಸ್ಟ್‌ 15 ರಂದು 9 ಗಂಟೆಯಿಂದ 2ರ ತನಕ ಹೆಬ್ರಿ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ.

ವಿಶ್ವ ಹಿಂದು ಪರಿಷದ್‌ ಹೆಬ್ರಿ ಪ್ರಖಂಡದ ಅಧ್ಯಕ್ಷ ಗಣಪತಿ ನಾಯಕ್‌ ಮುದ್ರಾಡಿ ಅಧ್ಯಕ್ಷತೆ ವಹಿಸುವರು. ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಉದ್ಘಾಟಿಸುವರು. ಹೆಬ್ರಿ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರಾಜೇಶ ನಾಯಕ್‌, ಗ್ರಾಮ ವಿಕಾಸ ಮಂಗಳೂರು ವಿಭಾಗದ ಪರ್ಯಾವರಣ ಪ್ರಮುಖ್‌ ರಮಿತಾ ಸೂರ್ಯವಂಶಿ, ಹೆಬ್ರಿ ರಾಘವೇಂದ್ರ ಜನರಲ್‌ ಆಸ್ಪತ್ರೆಯ ಡಾ. ರಾಮಚಂದ್ರ ಐತಾಳ್‌,  ರಕ್ತನಿಧಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡಿನ ವೈದ್ಯಾಧಿಕಾರಿ ಡಾ.ವೀಣಾ ಕುಮಾರಿ ಎಂ, ವಿಶ್ವ ಹಿಂದು ಪರಿಷದ್‌, ಬಜರಂಗದಳ ಹೆಬ್ರಿ ವಲಯದ ಅಧ್ಯಕ್ಷ ಪ್ರಸಾದ್‌ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡುವಂತೆ ವಿಶ್ವ ಹಿಂದು ಪರಿಷದ್‌, ಬಜರಂಗದಳ ಹೆಬ್ರಿ ವಲಯದ ಪ್ರಕಟಣೆ ತಿಳಿಸಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments