ಹೆಬ್ರಿ : ಹೆಬ್ರಿ ಅನಂತ ಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ 80ನೇ ವರ್ಷದ ಸ್ವತಂತ್ರ ದಿನಾಚರಣೆಯ ಆಚರಿಸಲಾಯಿತು
ಸಂಘದ ಅಧ್ಯಕ್ಷರಾದ ವಿಜಯ ಪೂಜಾರಿ ನೇತೃತ್ವದಲ್ಲಿ ನಿವೃತ್ತ ಪಶುವೈದ್ಯಾಧಿಕಾರಿ ನಾರಾಯಣ ಎಂ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಪರಶುರಾಮ್ ಹೆಬ್ರಿ, ಕಾನೂನು ಸಲಹೆಗಾರದ ವಕೀಲರಾದ ಭರತ್ ಕುಮಾರ್ ಶೆಟ್ಟಿ, ಹೆಬ್ರಿ ಪೊಲೀಸ್ ಠಾಣೆಯ ಎಎಸ್ಐ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಕನ್ಯಾನ ಸಂತೋಷ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಗೋಕಲಾಚಾರ್ಯ ವಂದಿಸಿದರು ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ನಿಕಟ ಪೂರ್ವ ಅಧ್ಯಕ್ಷರುಗಳು ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಹೆಬ್ರಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಪ್ರಾರ್ಥನೆ ರಾಷ್ಟ್ರಗೀತೆ ಧ್ವಜವಂದನೆ ನೆರವೇರಿಸಲಾಯಿತು.



