ಅಜೆಕಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಜೆಕಾರು ವಲಯದ ಮರ್ಣೆ ಒಕ್ಕೂಟದ 3 ಸ್ವಸಹಾಯ ಸಂಘಗಳು ಒಟ್ಟಾಗಿ ಸ್ವಾತಂತ್ರ್ಯೋತ್ಸವ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಿದರು.
ಬೋರ್ಗಲ್ ಕುಂಜ ಮಂಜುಶ್ರೀ ಚಾಮುಂಡೇಶ್ವರಿ ಸಂಘಗಳು ಪ್ರಾರಂಭವಾಗಿ 25 ವರ್ಷಗಳನ್ನು ಪೂರೈಸಿದ್ದು ಈ ಪ್ರಯುಕ್ತ ಸ್ವಾತಂತ್ರೋತ್ಸವ ದಿನದಂದು ಧ್ವಜಾರೋಹಣವನ್ನು ನೆರವೇರಿಸಿದರು.
ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ರತ್ನಾಕರ ಪೂಜಾರಿ ಅವರ ಮನೆಯಲ್ಲಿ ಆಚರಿಸಿದರು.
ಧ್ವಜಾರೋಹಣವನ್ನು ಹಿರಿಯರಾದ ಶ್ರೀಧರ್ ಪೂಜಾರಿಯವರು ನೆರವೇರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಮಾಜಿ ಅಧ್ಯಕ್ಷರಾದ ಮನೋಹರ್ ಸೋನ್ಸ್ ವಹಿಸಿದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ನಿಷ್ವಿತ, ವಲಯ ಅಧ್ಯಕ್ಷ ಶಂಕರ್ ಆಚಾರ್ಯ, ಪಂಚಾಯತಿ ಸದಸ್ಯರಾದ ಯಶೋಧ ಶೆಟ್ಟಿ ಜಲಜ ಶೆಟ್ಟಿ ಒಕ್ಕೂಟ ಅಧ್ಯಕ್ಷ ಪ್ರವೀಣ್ ಮಡಿವಾಳ, ಒಕ್ಕೂಟ ಕಾರ್ಯದರ್ಶಿ ದೀಪ ಸಂಜೀವಿನಿ ಸಂಘದ ಅಧ್ಯಕ್ಷೆ ಸುಮಿತ್ರ ಭಂಡಾರಿ ಸೇವಾ ಪ್ರತಿನಿಧಿಯಾದ ವಿಜಯಬಕಾಮತ್, ಸಂಘಗಳ ಸದಸ್ಯರು ಉಪಸ್ಥಿತರಿದ್ದರು.



