ಶಿರ್ಲಾಲು : ಶಿರ್ಲಾಲು ಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ದಾನಿಗಳು ಕೊಡಮಾಡಿದ ಸಮವಸ್ತ್ರ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ದೇವಾಡಿಗ ಧ್ವಜಾರೋಹಣ ನೆರವೇರಿಸಿ ದೇಶ ದೇಶಪ್ರೇಮವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ಸಮಾಜಕ್ಕಾಗಿ ಒಂದಷ್ಟು ಸೇವೆಯನ್ನು ಮಾಡಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದಾನಿಗಳು ನೀಡಿದ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮವಸ್ತ್ರ ನೀಡಿದ ದಾನಿಗಳಾದ ಶೀತಲ್ ಜೈನ್, ಸೂರಜ್ ಜೈನ್, ಮಹಾವೀರ ಜೈನ್ ಅವರನ್ನು ಶಾಲಾ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ನೋಟ್ ಪುಸ್ತಕ ಲೇಖನ ಸಾಮಗ್ರಿಗಳನ್ನು ಒದಗಿಸಿದ ನಿವೃತ್ತ ಶಿಕ್ಷಕ ಲಕ್ಷ್ಮಣ ಸಾಲ್ವಂಕರ್, ಕ್ರೀಡಾ ಪರಿಕರಗಳನ್ನು ಒದಗಿಸಿದ ಹಳೆ ವಿದ್ಯಾರ್ಥಿಗಳ ಪರವಾಗಿ ಸಂದೀಪ್, ಹಾಗೂ ದಾನಿಗಳಾದ ಗಿರೀಶ್ ಆಚಾರ್ಯ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು..
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ದೇವಾಡಿಗ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್ ಶೆಟ್ಟಿ, ಉಪಾಧ್ಯಕ್ಷೆ ಪ್ರಮೀಳಾ ನಾಯ್ಕ್, ಪಂಚಾಯತ್ ಮಾಜಿ ಸದಸ್ಯರಾದ ಗಿರೀಶ್ ಶೆಟ್ಟಿ, ಪ್ರೇಮ,ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೂರಜ್ ಜೈನ್ ಶತಮಾನ ಕಂಡ ನಮ್ಮ ಶಾಲೆಯನ್ನು ಅಭಿವೃದ್ಧಿಯತ್ತ ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಹಿರಿಯ ಶಿಕ್ಷಕಿ ಗೀತಾ ಎಸ್ ರಾವ್ ನಿರೂಪಿಸಿದರು. ಮುಖ್ಯೋಪಾಧ್ಯಾಯ ಶ್ರೀನಿವಾಸ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಸಂತ್ ನಾಯ್ಕ್ ನೇತೃತ್ವದಲ್ಲಿ ಪುರ ಮೆರವಣಿಗೆ ಬಹಳ ಆಕರ್ಷಣೀಯವಾಗಿ ನೆರವೇರಿತು. ಶಿಕ್ಷಕಿ ಅಮೃತಾ ವಂದಿಸಿದರು. ಶಿಕ್ಷಕಿಯರಾದ ಕಲಾವತಿ , ವನಿತ ಸಹಕರಿಸಿದರು. ಎಸ್ ಡಿ ಎಂ ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು, ಶಾಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪದ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಾಷಣಗಳು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಕಾರ್ಯಕ್ರಮಕ್ಕೆ ಮೆರುಗು ನೀಡಿತು.



