ಮುದ್ರಾಡಿಯ ಅಪಾಯಕಾರಿ ಮರಗಳ ತೆರವಿಗೆ ನಿರಂತರ ಹೋರಾಟ ಮಾಡಿದ ಪ್ರಶಾಂತ ಪೈ.
ರೆಡ್ ಕ್ರಾಸ್ ಹೆಬ್ರಿ ತಾಲ್ಲೂಕು ಘಟಕ
ಮುದ್ರಾಡಿ: ಮುದ್ರಾಡಿ ಪ್ರೌಢಶಾಲೆಯಿಂದ ಪೇಟೆಯ ತನಕ ಅಪಾಯಕಾರಿ ಮರಗಳು, ರಸ್ತೆಗೆ ವಾಲಿದ ಬೃಹತ್ ಗೆಲ್ಲುಗಳು, ಸತ್ತು ಹೋಗಿ ಬೀಳುವ ಸ್ಥಿತಿಯಲ್ಲಿ ಇದ್ದ ಮರಗಳನ್ನು ಅತೀ ಶೀಘ್ರವಾಗಿ ತೆರವು ಮಾಡುವಂತೆ ಸಲ್ಲಿಸಿದ ಮನವಿಯಂತೆ ಮಂಗಳವಾರ ಮರಗಳ ತೆರವು ಕಾರ್ಯ ನಡೆಯುತ್ತಿದೆ.
ಸಾಮಾಜಿಕ ಹೋರಾಟಗಾರ ಮುದ್ರಾಡಿ ಪ್ರಶಾಂತ ಪೈ ಹಲವು ಭಾರಿ ಮನವಿ ಮಾಡಿಕೊಂಡಿದ್ದರು. ಇತ್ತೀಚೆಗೆ ಹೆಬ್ರಿಯ ರೆಡ್ ಕ್ರಾಸ್ ಘಟಕದ ಮೂಲಕದ ಮೂಲಕವೂ ಮನವಿ ನೀಡಿ ಒತ್ತಾಯಿಸಲಾಗಿತ್ತು. ಸ್ಥಳೀಯ ಮುಖಂಡರಾದ ಮುದ್ರಾಡಿ ಶುಭದರ ಶೆಟ್ಟಿ ಮತ್ತು ವರಂಗ ಲಕ್ಷ್ಮಣ ಆಚಾರ್ಯ ಅವರು ಮುತುವರ್ಜಿ ವಹಿಸಿ ತೆರವು ಕಾರ್ಯಕ್ಕೆ ಸಹಕರಿದರು.
“ಹೆಬ್ರಿ ನ್ಯೂಸ್” ಸಹಿತ ಮಾಧ್ಯಮಗಳು ಅಪಾಯಕಾರಿ ಮರಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿತ್ತು.
ಇದೀಗ ಹೆಬ್ರಿಯ ಹಲವೆಡೆ ಮರಗಳ ತೆರವು ಕಾರ್ಯಗಳು ನಡೆಯುತ್ತಿವೆ.
ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ ಹೋರಾಟಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.
ಅರಣ್ಯ ಅಧಿಕಾರಿಗಳಿಗೆ ಮೆಸ್ಕಾಂ ಅಧಿಕಾರಿಗಳನ್ನು ಮತ್ತು ತಂಡ ಸಹಕಾರ ನೀಡಿದ್ದಾರೆ. ಸ್ಥಳೀಯರು ಸಹಕಾರ ನೀಡಿದ್ದಾರೆ.


