Wednesday, August 19, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ಶಾಲೆ ಬಳಿಯ ಅಪಾಯಕಾರಿ ಮರ ತೆರವು: 20ಕ್ಕೂ ಹೆಚ್ಚು ಸ್ವಯಂ ಸೇವಕರು,ಅರಣ್ಯ ಇಲಾಖೆ, ಮೆಸ್ಕಾಂ...

ಮುದ್ರಾಡಿ ಶಾಲೆ ಬಳಿಯ ಅಪಾಯಕಾರಿ ಮರ ತೆರವು: 20ಕ್ಕೂ ಹೆಚ್ಚು ಸ್ವಯಂ ಸೇವಕರು,ಅರಣ್ಯ ಇಲಾಖೆ, ಮೆಸ್ಕಾಂ ಅಧಿಕಾರಿ – ಸಿಬ್ಬಂದಿಗಳ ಸಹಕಾರ.

ಮಾಧ್ಯಮಗಳು ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಮುದ್ರಾಡಿಯ ಪ್ರಮುಖರು.

ಮುದ್ರಾಡಿ : ಮುದ್ರಾಡಿಯ ಅಪಾಯಕಾರಿ ಮರಗಳನ್ನು ತೆರವು ಮಾಡಲಾಗಿದ್ದು ಹಲವು ದಿನಗಳ ಆತಂಕ ದೂರವಾಗಿದೆ.

ಮುದ್ರಾಡಿ ಗ್ರಾಮಸ್ಥರು , ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯರು, ಮುದ್ರಾಡಿ ನ್ಯೂಸ್, ಹೆಬ್ರಿಯ ಪತ್ರಿಕಾ ಮಾಧ್ಯಮಗಳ ಪತ್ರಕರ್ತರು, ಹೆಬ್ರಿ ನ್ಯೂಸ್ ವೆಬ್ ಸುದ್ದಿ ತಾಣ ಮತ್ತು ರೆಡ್ ಕ್ರಾಸ್ ಸೊಸೈಟಿ ಹೆಬ್ರಿ ಘಟಕದ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅನುಮತಿ ಮೇರೆಗೆ ಮುದ್ರಾಡಿ ಹೈಸ್ಕೂಲ್ ಮತ್ತು ಬರ್ಸಬೆಟ್ಟು ಕ್ರಾಸ್ ಬಳಿಯ ಅಪಾಯಕಾರಿ ಮರಗಳನ್ನು ಮತ್ತು ಕೆಲವು ಮರದ ಗೆಲ್ಲುಗಳನ್ನು ಕಡಿಯುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆತಂಕ ದೂರವಾಗಿದೆ.

20ಕ್ಕೂ ಮಿಗಿಲಾದ ಮುದ್ರಾಡಿ ಪರಿಸರದ ಸಾರ್ವಜನಿಕ ಸ್ವಯಂ ಸೇವಕರು, ಮೆಸ್ಕಾಂ ಮುದ್ರಾಡಿ ಸರ್ವ ಸಿಬ್ಬಂದಿಗಳ ಅವಿರತ ಶ್ರಮ, ಮುದ್ರಾಡಿ ಗ್ರಾಮ ಪಂಚಾಯತ್ ಮತ್ತು ಅರಣ್ಯ ಅಧಿಕಾರಿಗಳ ಮಾರ್ಗದರ್ಶನದ ನೆರವಿನಿಂದ ಪ್ರಯಾಣಿಕರ ಸುಗಮ ಸಂಚಾರಕ್ಕೆ ಸ್ಪಂದಿಸಿದ ಸಾಮಾಜಿಕ ಕಾರ್ಯ ಸಾರ್ವಜನಿಕರ ಮತ್ತು ಪ್ರಯಾಣಿಕರ ಮನ್ನಣೆಗೆ ಪಾತ್ರವಾಗಿದೆ ಎಂದು ಸ್ಥಳೀಯರು ಪ್ರಶಂಸಿದ್ದಾರೆ.

ಮುದ್ರಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶುಭಧರ ಶೆಟ್ಟಿ ಅವರು ಮರಗಳ ತೆರವು ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ವರಂಗದ ಲಕ್ಷ್ಮಣ ಆಚಾರ್ಯ ವರಂಗ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸನತ್ ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ, ಗಣಪತಿ ಎಂ, ರೆಡ್ ಕ್ರಾಸ್ ಹೆಬ್ರಿ ಅಧ್ಯಕ್ಷರಾದ ವರಂಗ ವೀಣಾ ಆರ್ ಭಟ್, ಮುದ್ರಾಡಿ ಪ್ರಶಾಂತ್ ಪೈ, ಮುದ್ರಾಡಿ ಪ್ರದೀಪ್ ಭಟ್, ಪ್ರೀತಮ್ ಶೆಟ್ಟಿ ಹಾಡಿ ಮನೆ ಸೇರಿ ಹಲವಾರು ಸಾರ್ವಜನಿಕರು ಸಹಕರಿಸಿದರು.

ಮುದ್ರಾಡಿ ಗ್ರಾಮದ ನಾಗರೀಕರ ಒಗ್ಗಟ್ಟಿನ ಸಹಕಾರದಿಂದ ಈ ಕಾರ್ಯ ಆಗಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಸರ್ವರ ಶ್ಲಾಘನೆಗೆ ಪಾತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments