Thursday, September 24, 2026
Homeಹೆಬ್ರಿಪಡುಕುಡೂರು ಪ್ರಪುಲ್ಲ ದಿನೇಶ್ ಶೆಟ್ಟಿ ಅವರ " ಪೊಲ್ಲಕ್ಕೆನ ಅಜಕೆ " ಕೃತಿ ಲೋಕಾರ್ಪಣೆ.

ಪಡುಕುಡೂರು ಪ್ರಪುಲ್ಲ ದಿನೇಶ್ ಶೆಟ್ಟಿ ಅವರ ” ಪೊಲ್ಲಕ್ಕೆನ ಅಜಕೆ ” ಕೃತಿ ಲೋಕಾರ್ಪಣೆ.

ಮುಂಬಯಿ : ತುಲುವೆರೆ ಕಲ ಮುಂಬೈ ವಲಯದ ಪ್ರಥಮ ವರ್ಷದ ವಾರ್ಷಿಕೋತ್ಸವ “ತುಲುವೆರೆ ಕಲತೋಚ್ಚಯ” ಕಾರ್ಯಕ್ರಮವು ಆದಿತ್ಯವಾರ ಡೊಂಬಿವಿಲಿಯ ಪ್ರೀತಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು.

ತುಲುವೆರೆ ಕಲ(ರಿ) ಬೊಂಬೈ ಎಗ್ಗೆಯನ್ನು ಮುಂಬೈಯಲ್ಲಿ ಸ್ಥಾಪಿಸಿ ಅದರ ಮುಖೇನ ತುಳುವರು ತುಳು ಭಾಷೆಯ ತೇರನ್ನು ಹೊರನಾಡಿನಲ್ಲೂ ಎಳೆದು ಅದರ ಹಿರಿಮೆಯನ್ನು ಉನ್ನತ ಸ್ಥಾನದಲ್ಲಿರಿಸಬೇಕು ಎನ್ನುವ ಸದುದ್ಧೇಶದಿಂದ ಸತತ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ. ಸಮಾರಂಭದ ಅಧ್ಯಕ್ಷತೆಯನ್ನು ತುಲುವೆರೆ ಕಲ ಬೊಂಬೈ ಎಗ್ಗೆಯ ಅಧ್ಯಕ್ಷೆ ಪ್ರಪುಲ್ಲ ದಿನೇಶ್ ಶೆಟ್ಟಿ , ಸಹ ಅಧ್ಯಕ್ಷ ಸ್ಥಾನವನ್ನು ತುಲುವೆರೆ ಕಲದ ಸಂಸ್ಥಾಪಕಿ , ತುಲು ಲಿಪಿಯ ಶಿಕ್ಷಕಿ ಗೀತಾ ಲಕ್ಷ್ಮೀಶ್ ವಹಿಸಿದ್ದರು.

ಉದ್ಘಾಟನೆಯನ್ನು ಕೃಷ್ಣಿ ಎಂ.ಶೆಟ್ಟಿ, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ, ಬಂಟರಸಂಘ ಡೊಂಬಿವಿಲಿ ಸಮಿತಿ ನೆರವೇರಿಸಿದರು. ಡಾ.ದಿವಾಕರ್ ಟಿ. ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ಕರ್ನಾಟಕ ಸಂಘ ಡೊಂಬಿವಿಲಿ , ಸುಬ್ಬಯ್ಯ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರು, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ, ಬಂಟರ ಸಂಘ ಮುಂಬೈ, ಶಂಕರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಆದಿಶಕ್ತಿ ಕನ್ನಡ ಸಂಘ , ಮಾಜಿವಾಡ ,ಥಾಣೆ, ರಾಮಣ್ಣ ಭಂಡಾರಿ,ವಕೀಲರು, ಹೈಕೋರ್ಟ್, ಮುಂಬೈ, ಪ್ರಸನ್ನ ಎನ್.ಶೆಟ್ಟಿ, ಬೆಳ್ಳಂಪಳ್ಳಿ, ಕುಕ್ಕಿಕಟ್ಟೆ, ಹೋಟೆಲ್ ಉದ್ಯಮಿ ಮತ್ತು ಸಮಾಜಸೇವಕರು, ಅರುಣ್ ಎಸ್.ಶೆಟ್ಟಿ , ಪಡುಕುಡೂರ್, ಕಾರ್ಯಾಧ್ಯಕ್ಷರು, ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿ ,ಬಂಟರ ಸಂಘ ಡೊಂಬಿವಿಲಿ ಸಮಿತಿ, ಹರೀಶ್ ಎಸ್.ಶೆಟ್ಟಿ ಪಡುಕುಡೂರು ಪಡುಪರ್ಕಳ, ಹೋಟೆಲ್‌ ಉದ್ಯಮಿ ಮತ್ತು ಸಮಾಜಸೇವಕರು, ಕುಂಠಿನಿ ಪ್ರಕಾಶ್ ಹೆಗ್ಡೆ, ಸಂಪಾದಕರು, ಛಾಯಾ ಕಿರಣ ಮಾಸ ಪತ್ರಿಕೆ,ಮುಂಬೈ, ಉದಯ ಜೆ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಸಿರಿನಾಡ ವೆಲ್ಪೇರ್ ಅಸೋಸಿಯೇಷನ್, ಡೊಂಬಿವಿಲಿ, ಮಂಜುಳಾ ಎಸ್.ಶೆಟ್ಟಿ, ಅಧ್ಯಕ್ಷೆ, ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯ ಚ್ಯಾರಿಟೇಬಲ್ ಟ್ರಸ್ಟ್, (ರಿ) ಮುಂಬೈ, ಜಯಂತ್ ಶೆಟ್ಟಿ, ಉಪ ಕಾರ್ಯದರ್ಶಿ, ಬಂಟರ ಸಂಘ ಡೊಂಬಿವಿಲಿ ಸಮಿತಿ ಸಹಿತ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪಡುಕುಡೂರಿನ ಪ್ರಪುಲ್ಲ ದಿನೇಶ್ ಶೆಟ್ಟಿಯವರ ” ಪೊಲ್ಲಕ್ಕನ ಅಜಕೆ ” ಲೋಕಾರ್ಪಣೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!