Thursday, September 24, 2026
Homeಹೆಬ್ರಿದೊಂಡೆರಂಗಡಿ : ಯಕ್ಷ ಸ್ನೇಹ ಸಮ್ಮಿಲನ‌' ಕಾರ್ಯಕ್ರಮ.

ದೊಂಡೆರಂಗಡಿ : ಯಕ್ಷ ಸ್ನೇಹ ಸಮ್ಮಿಲನ‌’ ಕಾರ್ಯಕ್ರಮ.

ಕಲಾ ಸಂಘಟಕ ಅಶೋಕ್ ಕುಮಾರ್ ದೊಂಡೇರಂಗಡಿ ಅವರಿಗೆ ಸನ್ಮಾನ.

ದೊಂಡೆರಂಗಡಿ : ದೊಂಡೇರಂಗಡಿಯ ಯಕ್ಷಮಿತ್ರರು ಆಯೋಜಿಸಿದ ಮೇಳದ ಹಾಗೂ‌ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಜರುಗುವ ‘ಯಕ್ಷ ಸ್ನೇಹ ಸಮ್ಮಿಲನ‌’ ಕಾರ್ಯಕ್ರಮದ ಐದನೇ ವರ್ಷದ ಕಾರ್ಯಕ್ರಮವು ದೊಂಡೇರಂಗಡಿ ಶ್ರೀ ರಾಮ ಮಂದಿರದ ಅಯೋಧ್ಯಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಡಿ.ಲಕ್ಷ್ಮಣ್, ಸುಬ್ರಹ್ಮಣ್ಯ ರಾವ್,ಕಲಾವಿದ ಹಾಗೂ ಉಪನ್ಯಾಸಕ ಅಂಬರೀಶ್ ಭಾರದ್ವಾಜ್, ಉದ್ಯಮಿ ಜೀವನ್ ಶೆಟ್ಟಿ, ದೇವೇಂದ್ರ ಕಾಮತ್ , ಕೃಷ್ಣ ಶೆಣೈ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

ಯಕ್ಷಗಾನ ಕಲಾವಿದ ಶಶಿಕಾಂತ್ ಶೆಟ್ಟಿ ಕಾರ್ಕಳ ಹಾಗೂ ಕಲಾ ಸಂಘಟಕ ಅಶೋಕ್ ಕುಮಾರ್ ದೊಂಡೇರಂಗಡಿ ಅವರನ್ನು ಸನ್ಮಾನಿಸಲಾಯಿತು.

ಸುಭಾಷ್ ಸ್ವಾಗತಿಸಿದರು. ಕುಕ್ಕುಜೆ ವಿನಯ ಆರ್ ಭಟ್ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಅಂಬಾ ಶಪಥ’ ಯಕ್ಷಗಾನ ಪ್ರದರ್ಶನಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!