ಹೆಬ್ರಿ : ಹೆಬ್ರಿ ಪೊಲೀಸ್ ಠಾಣೆಯ ನೂತನ ಸಬ್ ಇನ್ಸ್ ಫೆಕ್ಟರ್ ಆಗಿ ಲೋಹಿತ್ ಕುಮಾರ್ ಸಿಎಸ್ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಮೂಲತ: ಚಿಕ್ಕಮಗಳೂರಿನವರಾದ ಲೋಹಿತ್ ಕುಮಾರ್ ಸಿಎಸ್ 2021ನೇ ಬ್ಯಾಚ್ ನ ಸಬ್ ಇನ್ಸ್ ಫೆಕ್ಟರ್ ಆಗಿದ್ದಾರೆ.
ಪ್ರಥಮವಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೇವೆಯನ್ನು ಆರಂಭಿಸಿ ಬಳಿಕ ಶಿರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಹೆಬ್ರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಶಿರ್ವ ಕೊಲೆ ಪ್ರಕರಣದಲ್ಲಿ ಸಹಾಯಕ ತನಿಖಾಧಿಕಾರಿಯಾಗಿಯೂ ಲೋಹಿತ್ ಕುಮಾರ್ ಕರ್ವತ್ಯ ನಿರ್ವಹಿಸಿದ್ದಾರೆ.



