Thursday, September 24, 2026
Homeಹೆಬ್ರಿಮುದ್ರಾಡಿ ಬಲ್ಲಾಡಿಯಲ್ಲಿ ಟಾರೀಸ್ ಮೇಲೆ ನಳನಳಿಸಿದ ಭತ್ತದ ಪೈರು: ಬಲ್ಲಾಡಿ ಸುಧಾಕರ ಪೂಜಾರಿ ಕೃಷಿ ಸಾಧನೆ.

ಮುದ್ರಾಡಿ ಬಲ್ಲಾಡಿಯಲ್ಲಿ ಟಾರೀಸ್ ಮೇಲೆ ನಳನಳಿಸಿದ ಭತ್ತದ ಪೈರು: ಬಲ್ಲಾಡಿ ಸುಧಾಕರ ಪೂಜಾರಿ ಕೃಷಿ ಸಾಧನೆ.

ಹೆಬ್ರಿ : ಹೊಸತನದ ಕೃಷಿಯನ್ನು ಅನ್ವೇಶಿಸುವ ಪ್ರಗತಿಪರ ಕೃಷಿಕ ಶ್ರಮಜೀವಿ ರೈತ ಮುದ್ರಾಡಿ ಬಲ್ಲಾಡಿಯ ಸುಧಾಕರ ಪೂಜಾರಿ ಅವರು ಮನೆಯ ಟೆರೇಸ್ ಮೇಲೆ ಭತ್ತದ ಕೃಷಿಯನ್ನು ಮಾಡಿ ಎಲ್ಲರನ್ನು ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಸದಸ್ಯರಾಗಿರುವ ಸುಧಾಕರ ಪೂಜಾರಿ ಹೆಬ್ರಿ ತಾಲೂಕು ಮುದ್ರಾಡಿ ಬಲ್ಲಾಡಿ ಗ್ರಾಮದವರು. ಸುಮಾರು 270 ಬುಡಗಳನ್ನು ಪ್ಲಾಸ್ಟಿಕ್ ಬಳಕೆ ಮಾಡಿ ನೇಜಿಗಳನ್ನು ಭದ್ರ ಮಾಡಿ ಇರಿಸಿದ್ದಾರೆ.

ಅಚ್ಚುಕಟ್ಟಿನ ವ್ಯವಸ್ಥೆ : ಅನೇಕ ವರ್ಷಗಳಿಂದ ಇಂತಹ ಪ್ರಯೋಗಗಳನ್ನು ಮಾಡಬೇಕೆಂದು ಸುಧಾಕರ ಪೂಜಾರಿ ಕನಸು ಕನಸು ನನಸಾಗಿದೆ. ಸಮಗ್ರ ಅಂತರ ಕಾಯ್ದುಕೊಂಡು, ಫೈರುಗಳ ಬೆಳವಣಿಗೆಗೆ ಬೇಕಾದ ವೈಜ್ಞಾನಿಕ ಪ್ರಯೋಗಗಳನ್ನು ಟಾರಿಸ್ ನಲ್ಲಿ ಮಾಡಿದ್ದಾರೆ.

ಕದಿರು ಕಟ್ಟಲು ತೆನೆ ಬಳಕೆ : ಮನೆಯಲ್ಲಿ ಈ ವರ್ಷ ಕದಿರು ಕಟ್ಟಲು ಮನೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಬಳಸಬೇಕೆಂದ ಇರಾದೆಯಿಂದ ಸುಧಾಕರ ಪೂಜಾರಿ ಹೊಸ ಪ್ರಯೋಗ ಮಾಡಿದ್ದಾರೆ. ಸಂಪೂರ್ಣ ಸಾವಯವ : ಟಾರಿಸ್ ಮೇಲೆ ಬೆಳೆದಿರುವ ಪೈರು ಸಂಪೂರ್ಣವಾಗಿ ಸಾವಯವವಾಗಿದೆ. ಗೊಬ್ಬರದ ಪುಡಿ, ಮಣ್ಣು, ಸ್ವಲ್ಪ ಹೊಯ್ಗೆ ಬಳಸಿಕೊಂಡು ನಾಟಿ ಮಾಡಲಾಗಿದೆ. ಇದರಿಂದ ಮುಂದೆ ಉತ್ತಮ ಇಳುವರಿ ನಿರೀಕ್ಷೆ ಇದೆ.

ಸಮಗ್ರ ಕೃಷಿ : ಗದ್ದೆಯಲ್ಲಿ ಭತ್ತ ಬೆಳೆಯುದರೊಂದಿಗೆ, ವೀಳ್ಯದೆಲೆ, ಅಡಿಕೆ, ತೆಂಗು, ತೊಂಡೆಕಾಯಿ, ಕಾಳುಮೆಣಸು, ಗೇರು ಬೀಜ, ಪಪ್ಪಾಯ ಮಿಶ್ರ ಕೃಷಿಯನ್ನು ಮಾಡಿಕೊಂಡು ಸಮಗ್ರ ಬೆಳೆಯನ್ನು ಬೆಳೆದಿದ್ದಾರೆ.
ಸದ್ಯಕ್ಕೆ ಮಳೆ ಆಗುತ್ತಿರುವುದರಿಂದ ಫೈರಿಗೆ ನೀರಿನ ಅವಶ್ಯಕತೆ ಇಲ್ಲ. ಫೈರಿನ ಸಮೀಪ ಸಿಂಟೆಕ್ಸ್ ಅಳವಡಿಸಿ ಬೇಸಿಗೆ ಕಾಲದಲ್ಲಿ ಪೈಪ್ ಮೂಲಕ ನೀರಾವರಿ ನೀಡುವ ಯೋಚನೆ ಹೊಂದಿದ್ದಾರೆ.

ಕೃಷಿಯಲ್ಲಿ ಹೊಸತನ್ನು ಮಾಡಬೇಕೆಂದು ತುಂಬಾ ಸಮಯದಿಂದ ಯೋಚಿಸುತ್ತಿದ್ದೆ. ಸಾವಯವವಾಗಿ ಟಾರಿಸ್ ಮೇಲೆ ಭತ್ತದ ಕೃಷಿಯನ್ನು ಮಾಡಿದ್ದೇನೆ. ನಾನು ಹೊಸತನ ಇರಬೇಕೆಂದು ನಿರಂತರವಾಗಿ ಚಿಂತನೆ ಮಾಡುವವನು. ಕೃಷಿಯೊಂದಿಗೆ ವಿವಿಧ ರೀತಿಯ ಮಿಶ್ರ ಬೆಳೆಗಳನ್ನು ಬೆಳೆದಿದ್ದೇನೆ. ಇದರಲ್ಲಿ ನೆಮ್ಮದಿಯನ್ನು ಕಾಣುತ್ತೇನೆ.
– ಸುಧಾಕರ ಪೂಜಾರಿ ಬಲ್ಲಾಡಿ, ಕೃಷಿಕರು.

ಪರಂಪರಾ ಪದ್ಧತಿಯಿಂದ, ಹೊಸತನದ ಪದ್ಧತಿಗೆ ರೈತರು ಅಳವಡಿಸಿಕೊಂಡಾಗ ಭತ್ತದ ಕೃಷಿ ಉಳಿಸಲು ಸಾಧ್ಯ ಎಂಬುದಕ್ಕೆ ನೆಕ್ಕರ್ ಬೆಟ್ಟು ಸುಧಾಕರ ಪೂಜಾರಿ ಸಾಕ್ಷಿಯಾಗಿದ್ದಾರೆ.
ನಮ್ಮ ಮನೆಗೆ ತರುವ ಕದಿರು, ನಮ್ಮ ಮನೆಯಲ್ಲಿ ಬೆಳೆಯಬೇಕು ಎನ್ನುವ ಪೂರ್ವಿಕರ ನಂಬಿಕೆಯನ್ನು ಉಳಿಸಲು ಸಾಧ್ಯ ಟಾರಿಸ್ ಭತ್ತದ ಕೃಷಿ ಎಲ್ಲರಿಗೂ ಮಾದರಿ.

– ಉಮೇಶ್. ಬಿಕೆ, ಕೃಷಿ ಮೇಲ್ವಿಚಾರಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!