Thursday, September 24, 2026
Homeಹೆಬ್ರಿವಿದ್ಯಾರ್ಥಿಗಳಲ್ಲಿ ಹಿರಿಯರನ್ನು ಗೌರವಿಸುವ ಗುಣ ಬೆಳೆಯಬೇಕು: ನಿವೃತ್ತ ಶಿಕ್ಷಕ ಎಸ್.ರಾಮಕೃಷ್ಣ ಭಟ್.

ವಿದ್ಯಾರ್ಥಿಗಳಲ್ಲಿ ಹಿರಿಯರನ್ನು ಗೌರವಿಸುವ ಗುಣ ಬೆಳೆಯಬೇಕು: ನಿವೃತ್ತ ಶಿಕ್ಷಕ ಎಸ್.ರಾಮಕೃಷ್ಣ ಭಟ್.

ಹೆಬ್ರಿ ಎಸ್ ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ.

ಹೆಬ್ರಿ : ವಿದ್ಯಾರ್ಥಿಗಳಲ್ಲಿ ಹಿರಿಯರನ್ನು ಗೌರವಿಸುವ ಗುಣ ಬೆಳೆಯಬೇಕು. ಈಗಿನ ಕಾಲದಲ್ಲಿ ಎಲ್ಲರೂ ಹೇಳುತ್ತಾರೆ ಕಾಲ ಬದಲಾಗಿದೆ ಎಂದು ಕಾಲ ಬದಲಾಗಿಲ್ಲ. ನಾವು ಬದಲಾಗಿದ್ದೇವೆ. ನಮ್ಮ ಮನಸ್ಸು ಬದಲಾಗಿದೆ. ವ್ಯಕ್ತಿ ಮತ್ತು ವೃತ್ತಿ ಯಾವುದಾದರೂ ಕೂಡ ಎಲ್ಲರನ್ನೂ ಗೌರವಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಎಸ್ ಆರ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ದೇವರು ಉತ್ತಮ ಭವಿಷ್ಯವನ್ನು ಆರೋಗ್ಯವನ್ನು ನೀಡಲಿ ಎಂದು ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಎಸ್. ರಾಮಕೃಷ್ಣ ಭಟ್ ಹೇಳಿದರು. ಅವರು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ “ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ-2026” ನ್ನು ಉದ್ಘಾಟಿಸಿ, ಗುರುವಂದನೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ ಅವರು ಮಾತನಾಡಿ, ಎಷ್ಟೋ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಿದ ಹೆಗ್ಗಳಿಕೆ ಎಸ್. ರಾಮಕೃಷ್ಣ ಭಟ್ ಸರ್ ಅವರಿಗೆ ಸಲ್ಲುತ್ತದೆ. ಹಿಂದೆ ಕೂಡು ಕುಟುಂಬವಿತ್ತು. ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಹೇಳುತ್ತಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ. ಗುರು ತೋರಿದ ದಾರಿಯಲ್ಲಿ ನಾವು ನಡೆದಾಗ ಬದುಕು ಬೆಳಗುತ್ತದೆ. ಗುರುವನ್ನು ಗೌರವಿಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಸತತ ಐದು ವರ್ಷದಿಂದ ನಿರಂತರವಾಗಿ ಗುರುವಂದನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದೇವೆ.
ವಿದ್ಯಾರ್ಥಿಗಳನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಿದಂತಹ ಇಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು, ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದು ನಮ್ಮ ಶಿಕ್ಷಣ ಸಂಸ್ಥೆಯ ಭಾಗ್ಯ ಎಂದು ಹೇಳಿದರು.

ಈ ಸಂದರ್ಭ ಎಸ್.ಆರ್. ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲ ದೀಪಕ್ ಎನ್, ಎಸ್.ಆರ್.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿ ಸುಪ್ರಿತಾ ನಿರೂಪಿಸಿ, ದೀಪಕ್ ಎನ್ ಸ್ವಾಗತಿಸಿ, ಶಿಕ್ಷಕಿ ಮಂಜುಳ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!