ಜನಮೆಚ್ಚಿದ ನಿವೃತ್ತ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್ ಎಚ್ ಅವರಿಗೆ ಗೌರವ ಅರ್ಪಣೆ.
ಉಡುಪಿ : ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನ ಸುಧಾ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಮಣಿಪಾಲದಲ್ಲಿ ಶುಕ್ರವಾರ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ ನಡೆಯಿತು.
ಸೇವೆ ಸಲ್ಲಿಸಿದ ಎಲ್ಲಾ ಶಾಲೆಯಲ್ಲಿ ಜನಮೆಚ್ಚುಗೆ ಪಡೆದು ನಮ್ಮ ಮಾಸ್ಟ್ರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೊಟೇಶ್ವರ ಕೆಪಿಎಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್ ಎಚ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಗಣ್ಯರು ಚಂದ್ರ ನಾಯ್ಕ್ ಅವರ ಸೇವೆಯನ್ನು ಸ್ಮರಿಸಿದರು.



