Thursday, September 24, 2026
Homeಹೆಬ್ರಿಅಂಪಾರು ವೃತ್ತ ಮಟ್ಟದ ಕ್ರೀಡಾಕೂಟ.

ಅಂಪಾರು ವೃತ್ತ ಮಟ್ಟದ ಕ್ರೀಡಾಕೂಟ.

ಸಿದ್ಧಾಪುರ : ಅಂಪಾರು ವೃತ್ತ ಮಟ್ಟದ ಕ್ರೀಡಾಕೂಟ ಶನಿವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೇತೃತ್ವದಲ್ಲಿ ಸರಕಾರಿ ಪ್ರೌಢ ಶಾಲೆ ಸಿದ್ದಾಪುರ ದಲ್ಲಿ ಜರುಗಿತು. ಕ್ರೀಡಾ ಕೂಟವನ್ನು ಸಚ್ಚಿದಾನಂದ ಚಾತ್ರ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಬ್ಯಾಂಡುಗಳನ್ನು ಹೊಂದಿದ ವಿವಿಧ ಸಮವಸ್ತ್ರದಲ್ಲಿ ಕಂಗೊಳಿಸಿದ ಕ್ರೀಡಾಳುಗಳ ಆಕರ್ಷಕ ಪಥಸಂಚಲನದ ಗೌರವವನ್ನು ಮೋಹನದಾಸ ಶೆಟ್ಟಿ ಸಿದ್ದಾಪುರ ಗೌರವವನ್ನು ಸ್ವೀಕರಿಸಿದರು. ಕ್ರೀಡಾ ಧ್ವಜವನ್ನು ಉದ್ಯಮಿ ಸುರೇಶ್ ಶೆಟ್ಟಿ ಸಿದ್ದಾಪುರ ಅವರು ಅರಳಿಸಿದರು.

ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕ್ರೀಡಾಳುಗಳು ತಂದ ಕ್ರೀಡಾ ಜ್ಯೋತಿಯನ್ನು ರಾಮದಾಸ್ ಮಡಿವಾಳ ಬಾಂಡ್ಯ ವರು ಬೆಳಗಿಸಿ ಕ್ರೀಡಾಕೂಟವನ್ನು ಅಧಿಕೃತವಾಗಿ ಚಾಲನೆಗೊಳಿಸಿದರು. ಕ್ರೀಡಾಕೂಟದ ಪ್ರತಿಜ್ಞೆಯನ್ನು ಶಾಲಾ ನಾಯಕಿ ಚೈತ್ರ ಪ್ರಭು ಎಲ್ಲಾ ಕ್ರೀಡಾಪಟುಗಳಿಗೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಶ್ರೀಕಾಂತ್ ನಾಯಕ್ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರು, ಸಂಜೀವ್ ಶೆಟ್ಟಿ ಗೌರವಾಧ್ಯಕ್ಷರು, ಪ್ರವೀಣ್ ಪಟೇಲ್ ಹಿರಿಯ ವಿದ್ಯಾರ್ಥಿ ಸಂಘಟನೆ ಸಿದ್ದಾಪುರ, ಚಂದ್ರಕುಲಾಲ್ ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಸಿದ್ದಾಪುರ, ಗಣೇಶ ಶೇಟ್ ಖಜಾಂಚಿ ವಾರ್ಷಿಕೋತ್ಸವ ಸಮಿತಿ ಸಿದ್ದಾಪುರ, ರಮೇಶ್ ಪೂಜಾರಿ ಅಧ್ಯಕ್ಷರು ಎಸ್ ಡಿ ಎಂ ಸಿ ಸರ್ಕಾರಿ ಪ್ರೌಢಶಾಲೆ ಸಿದ್ದಾಪುರ, ಪ್ರಸಾದ್ ಶೆಟ್ಟಿ ಅಧ್ಯಕ್ಷರು ಎಸ್ ಡಿ ಎಂ ಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ,

ವೀಣಾ ಪ್ರಭು ಉಪಾಧ್ಯಕ್ಷರು ಎಸ್ ಡಿ ಎಂ ಸಿ ಸಿದ್ದಾಪುರ, ಸುಂದರ ನಾಯಕ್ ದೈಹಿಕ ಶಿಕ್ಷಣ ಶಿಕ್ಷಕರು ಸಿದ್ದಾಪುರ, ನಾಗೇಂದ್ರ ಪಿ ಡಿ ಓ ಸಿದ್ದಾಪುರ, ಪ್ರಭಾಕರ ಶೆಟ್ಟಿ ಸಿ ಆರ್ ಪಿ ಸಿದ್ದಾಪುರ,

ಶಂಕರ್ ದೇವಾಡಿಗ ಸಿ ಆರ್ ಪಿ ಶಂಕರ್ ನಾರಾಯಣ, ಶೇಖರ್ ಯು ಇ ಸಿ ಓ ಹಾಲಾಡಿ ವೃತ್ತ , ಉದ್ಯಮಿಗಳಾದ ಮಹೇಶ್ ನಾಯಕ್, ಮೊಹಮ್ಮದ್, ಶಂಕರ್ ಕನ್ನಂತ, ಕೃಷ್ಣ ಪೂಜಾರಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸಿದ್ದಾಪುರ, ಶ್ರೀಧರ ಕಾಮತ್ ಪಿಡಿಒ ಸಿದ್ದಾಪುರ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಸೋಮ ನಾಯ್ಕ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸತ್ಯನಾರಾಯಣ ಟಿ ಪಿ ಇ ಓ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶ್ರೀಧರ್ ಎಸ್ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!