ಹೆಬ್ರಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮದಗ ಕ್ರಿಕೆಟರ್ಸ್ (ರಿ.), ಇಂದಿರಾನಗರ, ಹೆಬ್ರಿ ಇವರ ವತಿಯಿಂದ ಜರಗುತ್ತಿರುವ 30ರ ಸಂಭ್ರಮದ ಗಣೇಶೋತ್ಸವದ ಪ್ರಯುಕ್ತ, ಶ್ರೀ ಗಣೇಶನಿಗೆ ಸಮರ್ಪಿಸಲಾಗುವ ರಜತ ಕಿರೀಟ ಮತ್ತು ಪಂಚಲೋಹದ ಪ್ರಭಾವಳಿಯ ಪೂಜೆಯನ್ನು ಹೆಬ್ರಿಯ ಪುರದೊಡೆಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಭಾನುವಾರ ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು.
ಬಳಿಕ ಮೆರವಣಿಗೆಯಲ್ಲಿ ರಜತ ಕಿರೀಟ ಮತ್ತು ಪ್ರಭಾವಳಿಯನ್ನು ಕೊಂಡೊಯ್ಯಲಾಯಿತು.
ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿ ಬಂದರು. ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.



