ಹೆಬ್ರಿ: ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ದಿನಾಂಕ 18/9/2026 ನೇ ಶುಕ್ರವಾರ ದಂದು ಮಧ್ಯಾಹ್ನ 3:00. ಗಂಟೆಗೆ ನಮ್ಮ ಹೆಬ್ರಿ ತಾಲ್ಲೂಕಿಗೆ ಆಗಮಿಸಲಿದ್ದಾರೆ.
ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ.
ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಸರ್ವ ಸದಸ್ಯರು, ಕಾಂಗ್ರೆಸ್ ಎಲ್ಲಾ ಕಾರ್ಯಕರ್ತ ಬಂಧುಗಳು ಭಾಗವಹಿಸುವಂತೆ ಪ್ರಚಾರ ಸಮಿತಿ ಬ್ಲಾಕ್ ಕಾಂಗ್ರೆಸ್ ಹೆಬ್ರಿ ಅಧ್ಯಕ್ಷರಾದ ನವೀನ್ ಕೆ ಅಡ್ಯಂತಾಯ ವಿನಂತಿಸಿದ್ದಾರೆ.
ವಿಷಯ:- ನಮ್ಮ ಹೆಬ್ರಿ ತಾಲೂಕಿನ ಹಾಗೂ ಅಕ್ಕಪಕ್ಕದ ತಾಲೂಕಿನ ಹಾಗೂ ಮಲೆನಾಡು ಪ್ರದೇಶದ ಎಲ್ಲಾ ಗ್ರಾಮಗಳನ್ನು ಕಸ್ತೂರಿ ರಂಗನ್ ವ್ಯಾಪ್ತಿಗೆ ಒಳಪಡಿಸಿ ಇರುವುದರಿಂದ. ಈ ವರದಿಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನಾಭಿಪ್ರಾಯವನ್ನು ತಿಳಿದುಕೊಂಡು. ಮುಂದಕ್ಕೆ ಈ ವರದಿಯನ್ನು ತಿರಸ್ಕಾರಗೊಳಿಸುವ ಪರವಾಗಿ, ಅಥವಾ ತಿದ್ದುಪಡಿ ಮಾಡುವ ಬಗ್ಗೆ. ಹಾಗೂ ನಮ್ಮ ಹೆಬ್ರಿ ತಾಲೂಕಿನಲ್ಲಿ 94c, ಅರ್ಜಿ ನಮೂನೆ 53,57ರ ಅಕ್ರಮ ಸಕ್ರಮದ ಮಂಜೂರತೀಯ ಅಡಚಣೆಗಳ ಬಗ್ಗೆನೂ ಈ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು, ಸಾರ್ವಜನಿಕ ಬಂಧುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಾತೀತವಾಗಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.



