ಹಲವು ಪ್ರಮುಖ ಯೋಜನೆಗಳಿಗೆ ಒಪ್ಪಿಗೆ ದೊರೆಯಲಿ : ಮಂಜುನಾಥ ಪೂಜಾರಿ
ಹೆಬ್ರಿ : ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯನ್ನು ಮಾಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿರುವುದು ಅತ್ಯಂತ ಸ್ವಾಗತಾರ್ಹ. ಇದರಿಂದ ಕರಾವಳಿಯ ಪ್ರವಾಸೋಧ್ಯಮ ಜೊತೆಗೆ ಸಮಗ್ರ ಅಭಿವೃದ್ಧಿಗೆ ಚಾಲನೆ ದೊರೆಯಲಿದೆ, ಉಡುಪಿ ಜಿಲ್ಲೆಯ ಹಲವು ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೂ ಅನುಮೋದನೆ ನೀಡಬೇಕು ಎಂದು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಮನವಿ ಮಾಡಿದ್ದಾರೆ.ಅವರು ಹೆಬ್ರಿಯ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ ಹೆಬ್ರಿ ತೀರ್ಥಹಳ್ಳಿ 169 ಎ ರಾಷ್ಟ್ರೀಯ ಹೆದ್ದಾರಿ ತ್ವರಿತ ಪೂರ್ಣಗೊಳಿಸಿ :
ಉಡುಪಿ ಹೆಬ್ರಿ ತೀರ್ಥಹಳ್ಳಿ 169 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪರಿಸರಕ್ಕೆ ಯಾವೂದೇ ಅನಗತ್ಯ ಹಾನಿಯಾಗದಂತೆ ವೈಜ್ಞಾನಿಕ ಮತ್ತು ಸುಸ್ಥಿರ ವಿಧಾನದಲ್ಲಿ ತ್ವರಿತವಾಗಿ ಆರಂಭಸಿ ಪೂರ್ಣಗೊಳಿಸಬೇಕು, ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯ ಜನರ ಹಿತಾಸಕ್ತಿ ಮತ್ತು ಸಂಚಾರದ ಅಗತ್ಯತೆಗಳಿಗೆ ಸಮಾನ ಆದ್ಯತೆ ನೀಡಬೇಕು ಎಂದು ಮಂಜುನಾಥ ಪೂಜಾರಿ ಮಾಡಿದ್ದಾರೆ.
ಕೊಲ್ಲೂರು ಧರ್ಮಸ್ಥಳ ಬೆಂಗಳೂರು ರೈಲ್ವೆ ಯೋಜನೆ ಆರಂಭಿಸಿ : ೨೦೧೯ ರಲ್ಲಿ ಅಂದಿನ ಕೇಂದ್ರ ಸರ್ಕಾರದ ಮಟ್ಟದಲ್ಲಿ ಗುರುತಿಸಿರುವ ಕೊಲ್ಲೂರು ಧರ್ಮಸ್ಥಳ ಬೆಂಗಳೂರು ರೈಲು ಸಂಪರ್ಕ ಯೋಜನೆಯನ್ನು ಮತ್ತೇ ಕಾರ್ಯಗತಗೊಳಿಸುವಂತೆ ಕೇಂದ್ರ ಸರ್ಕಾರದ ಹಮನ ಸೆಳೆಯಬೇಕು. ರೈಲ್ವೆ ಸಂಪರ್ಕವು ಕರಾವಳಿ ಬಾಗದ ಧಾರ್ಮಿಕ ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆ ಹಾಗೂ ಸಮಗ್ರ ಆರ್ಥಕ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಲಿದೆ.
ವಾರಾಹಿ ಯೊಜನೆ : ಕುಡಿಯುವ ನೀರಿನ ಕಾಮಗಾರಿಗೆ ವೇಗ : ವಾರಾಹಿ ಯೋಜನೆಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಿ ಹೆಬ್ರಿ ಕಾರ್ಕಳ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕು.
ಹೆಬ್ರಿ ಸರ್ಕಾರಿ ಸಮುದಾಯ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ : ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಸಕಲ ಮೂಲ ಸೌಕರ್ಯವನ್ನು ನೀಡಿ ಜನತೆಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡಬೇಕು.
ಹೆಬ್ರಿ ಕಾರ್ಕಳದ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿ : ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನಲ್ಲಿರುವ ಐತಿಹಾಸಿಕ ಧಾರ್ಮಿಕ ಹಾಗೂ ನೈಸರ್ಗಿಕ ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಗುರುತಿಸಿ ಅಭಿವೃದ್ಧಿಪಡಿಸಬೇಕು. ವರಂಗ, ಕೂಡ್ಲುತೀರ್ಥ, ಕಬ್ಬಿನಾಲೆ, ಚಿತ್ರಬೆಟ್ಟು ಜಲಪಾತ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಯಮಬದ್ಧ ಪ್ರವೇಶ ಕಲ್ಪಿಸಿ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು.
ಕಸ್ತೂರಿರಂಗನ್ ವರದಿ : ಭೌತಿಕ ಸಮೀಕ್ಷೆ ಮುಂದುವರಿಸಬೇಕು : ಕಸ್ತೂರಿರಂಗನ್ ವರದಿಗೆ ಸಂಬಂಧಿಸಿ ಸ್ಥಳೀಯ ಜನರ ವಾಸ್ತವ ಪರಿಸ್ಥಿತಿ, ಕೃಷಿ ಚಟುವಟಿಕೆಗಳು ಹಾಗೂ ಪರಿಸರದ ಸೂಕ್ಷ್ಮತೆಯನ್ನು ಪರಿಗಣಿಸಿ ಭೌತಿಕ ಪ್ರಕ್ರಿಯೆಯನ್ನು ವೈಜ್ಞಾನಿಕ ಮತ್ತು ವಾಸ್ತಾವಾಧಾರಿತ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೆಬ್ರಿಯ ಮುಂದಾಳು ಭಾಸ್ಕರ ಜೋಯಿಸ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ಕೆ ಅಡ್ಯಂತಾಯ, ಪ್ರಮುಖರಾದ ಶಂಕರ ಶೇರಿಗಾರ್, ಹರೀಶ ಶೆಟ್ಟಿ ನಾಡ್ಪಾಲು, ಭೋಜ ಕುಲಾಲ್ ಬೇಳಂಜೆ, ಹರೀಶ ಪೂಜಾರಿ ಬೇಳಂಜೆ, ಗಫೂರ್ ಅಜೆಕಾರು ಮುಂತಾದವರು ಹಾಜರಿದ್ದರು.




