ಕಸ್ತೂರಿರಂಗನ್ ವರದಿ ಆತಂಕ : ಜನಾಭಿಪ್ರಾಯ ಆಲಿಸಲಿರುವ ಸಿಎಂ.
ಹೆಬ್ರಿ : ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ ಜಾರಿಯಾಗಿರುವ ಹಿನ್ನಲೆಯಲ್ಲಿ ಜನರು ಆತಂಕದಲ್ಲಿದ್ದಾರೆ. ಕರ್ನಾಟಕ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ಹಲವು ಸಲ ತಿರಸ್ಕರಿಸಿದರೂ ಕೇಂದ್ರ ಸರ್ಕಾರ ಮತ್ತೇ ೭ನೇ ಭಾರಿಗೆ ಕಸ್ತೂರಿರಂಗನ್ ವರದಿಯ ಅಧಿಸೂಚನೆಯನ್ನು ಜಾರಿಗೆ ತಂದಿದೆ. ಅದಕ್ಕಾಗಿ ಅಂತಿಮ ಮತ್ತು ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನರ ಅಭಿಪ್ರಾಯವನ್ನು ಆಲಿಸಅಧ್ಯಕ್ಷಲು ಇದೇ 18ರಂದು ಹೆಬ್ರಿಗೆ ಆಗಮಿಸಲಿದ್ದಾರೆ ಎಂದು ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿಯ ನಾರಾಯಣಗುರು ಸಮುದಾಯ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಸೇರಿ ಹೆಬ್ರಿ ಕಾರ್ಕಳ ಮಾತ್ರವಲ್ಲದೆ ಕುಂದಾಪುರ, ತೀರ್ಥಹಳ್ಳಿ ಮಂಗಳೂರು ಸೇರಿದಂದತೆ ವಿವಿಧ ಭಾಗಗಳಿಂದಲೂ ಜನರು ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲಾಧಿಕಾರಿ, ಎಸ್ ಪಿ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪೂರ್ವಸಿದ್ಧತಾ ಕಾರ್ಯ ನಡೆಸಿದ್ದಾರೆ. ಭದ್ರತೆ, ಸಾರ್ವಜನಿಕ ಮೂಲಸೌಕರ್ಯ, ಸಂಚಾರ ನಿಯಂತ್ರಣ, ಪಾರ್ಕಿಂಗ್ ಸೇರಿದಂತೆ ಸರ್ವ ಸಿದ್ಧತೆ ನಡೆಯುತ್ತಿದೆ ಎಂದು ಮಂಜುನಾಥ ಪೂಜಾರಿ ಮಾಹಿತಿ ನೀಡಿದರು.
ಜನರ ಕಸ್ತೂರಿರಂಗನ್ ವರದಿಯ ಆತಂಕದಲ್ಲಿರುವ ಮಧ್ಯೆ ಮುಖ್ಯಮಂತ್ರಿ ಭೇಟಿ ಅತ್ಯಂತ ನಿರೀಕ್ಷೆ ಮತ್ತು ಮಹತ್ವವನ್ನು ಹುಟ್ಟಿಸಿದೆ. ಜನರ ಆತಂಕ ದೂರವಾಗುವ ನಿಟ್ಟಿನಲ್ಲಿ ಸ್ಪಷ್ಟ ನಿರ್ಧಾರವನ್ನು ಮುಖ್ಯ ಮಂತ್ರಿಯವರು ಮಾಡಲಿದ್ದಾರೆ. ಕಸ್ತೂರಿರಂಗನ್ ವರದಿ ವ್ಯಾಪ್ತಿಯ ಜನತೆ ಸೇರಿ ಎಲ್ಲಾ ಗ್ರಾಮಗಳ ಜನತೆ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂಜುನಾಥ ಪೂಜಾರಿಯವರು ವಿನಂತಿಸಿದ್ದಾರೆ. ಹೆಬ್ರಿಯ ಮುಂದಾಳು ಭಾಸ್ಕರ ಜೋಯಿಸ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ಪ್ರಮುಖರಾದ ಶಂಕರ ಶೇರಿಗಾರ್, ಹರೀಶ ಶೆಟ್ಟಿ ನಾಡ್ಪಾಲು, ಭೋಜ ಕುಲಾಲ್ ಬೇಳಂಜೆ, ಹರೀಶ ಪೂಜಾರಿ ಬೇಳಂಜೆ, ಗಫೂರ್ ಅಜೆಕಾರು ಮುಂತಾದವರು ಹಾಜರಿದ್ದರು.



