ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ತರಬೇತಿ ಕಾರ್ಯಗಾರ ನಡೆಯಿತು.
ಹೆಬ್ರಿ : ಪೊಲೀಸ್ ಇಲಾಖೆಯ ವತಿಯಿಂದ ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ನೇಮಕಾತಿ ವಿಚಾರಗಳ ಬಗ್ಗೆ ಮಂಗಳವಾರ ಮಾಹಿತಿ ಮತ್ತು ತರಬೇತಿ ಕಾರ್ಯಗಾರ ನಡೆಯಿತು. ಪೊಲೀಸ್ ಸಬ್ ಇನ್ಸ್ ಫೆಕ್ಟರ್ ರವಿ ಬಿ.ಕೆ. ಸಮಗ್ರ ಮಾಹಿತಿ ನೀಡಿದರು. ಸಬ್ ಇನ್ಸ್ ಫೆಕ್ಟರ್ ಚಂದ್ರ ಎ.ಕೆ ಮತ್ತಿತರರು ಭಾಗವಹಿಸಿದ್ದರು. ಹೆಬ್ರಿ ಪರಿಸರದ ಹಲವಾರು ಯುವಕರು ಭಾಗವಹಿಸಿದ್ದರು. 


