Sunday, August 9, 2026
Homeಹೆಬ್ರಿನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದಿಂದ ಕೊಡುಗೆ:ಹೊಸಂಗಡಿ ಮದ್ರಸ ವಿದ್ಯಾರ್ಥಿಗಳಿಗೆ ಕುರಾನ್ ಹಾಗೂ ಐಡಿ ಕಾರ್ಡ್...

ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದಿಂದ ಕೊಡುಗೆ:ಹೊಸಂಗಡಿ ಮದ್ರಸ ವಿದ್ಯಾರ್ಥಿಗಳಿಗೆ ಕುರಾನ್ ಹಾಗೂ ಐಡಿ ಕಾರ್ಡ್ ವಿತರಣೆ.

ಹೊಸಂಗಡಿ : ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ವತಿಯಿಂದ ಸಿದ್ದಾಪುರ ಹೊಸಂಗಡಿ ಬದ್ರಿಯಾ ಜುಮ್ಮಾ ಮಸ್ಜಿದ್ ಇಲ್ಲಿನ ಮದ್ರಸ ವಿದ್ಯಾರ್ಥಿಗಳಿಗೆ ಪವಿತ್ರ ಕುರಾನ್ ಗ್ರಂಥ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಹೊಸಂಗಡಿ ಬದ್ರಿಯಾ ಮಸೀದಿ ಆವರಣದಲ್ಲಿ ಇತ್ತೀಚಿಗೆ ನಡೆಯಿತು.ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಅಧ್ಯಕ್ಷ ಅನ್ಸಾರ್ ಹೊಸಂಗಡಿ ಅಧ್ಯಕ್ಷತೆ ವಹಿಸಿದ್ದರು.

ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಹುಸೇನ್ ಹೈಕಾಡಿ ನಮ್ಮ ನಾಡ ಒಕ್ಕೂಟದ ಕಾರ್ಯಕ್ರಮಗಳ ಕುರಿತು ಬೆಳಕು ಚೆಲ್ಲಿದರು. ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಪೀರು ಸಾಹೇಬ್ ,
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವಾ ಯಾಹ್ಯ ಮಲ್ಪೆ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ,.ಬದ್ರಿಯಾ ಜುಮ್ಮಾ ಮಸ್ಜಿದ್ ಹೊಸಂಗಡಿ ಇದರ ಅಧ್ಯಕ್ಷರಾದ ದಾದಫೀರ್. ಜಿಲ್ಲಾ ಸಮಿತಿ ಸದಸ್ಯ ಹಾರೂನ್ ರಶೀದ್ ಸಾಸ್ತಾನ, ಉಡುಪಿ ಘಟಕದ ಉಪಾಧ್ಯಕ್ಷ ಅಕ್ರಮ್ ಪೀರು ಸಾಹೇಬ್ ಹಾಗೂ ಮೊದಲಾದವರು ಉಪಸ್ಥಿರಿದ್ದರು.

ಹೊಸಂಗಡಿ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಪಿ.ಜಿ ಅಹಮದ್ ಮದನಿ ಮಾತನಾಡಿ ದುವಾಗೈದರು.
ನಮ್ಮ ನಾಡ ಒಕ್ಕೂಟದ ಹೆಬ್ರಿ ಘಟಕದ ಸಂಘಟನಾ ಕಾರ್ಯದರ್ಶಿ ಮುಸ್ತಾಕ್ ಹೆನ್ನಾಬೈಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಬ್ರಿ ಘಟಕದ ಪ್ರದಾನ ಕಾರ್ಯದರ್ಶಿ ಅರಾಫತ್ ಅಲ್ಬಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments