Saturday, August 8, 2026
Homeಹೆಬ್ರಿಕಜ್ಕೆ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿ ಬೇಟಿ

ಕಜ್ಕೆ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿ ಬೇಟಿ

ಹೆಬ್ರಿ : ಚಾತುರ್ಮಾಸದ ಪೂರ್ವಭಾವಿ ಕ್ಷೇತ್ರ ಸಂದರ್ಶನಕ್ಕಾಗಿ ಕಜ್ಕೆ ಅನ್ನಪೂರ್ಣೇಶ್ವರಿ ಸನ್ನಿಧಾನಕ್ಕೆ ಹಾಸನ ಅರೆಮಾದನಹಳ್ಳಿ ಮಠ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಕಿರಿಯ ಶ್ರೀಗಳಾದ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿಗಳು ಆಗಮಿಸಿ ಮಹಾಮಾತೆಯ ದರ್ಶನವನ್ನು ಪಡೆದರು.
ಶ್ರೀಗಳೊಂದಿಗೆ ಉತ್ತರ ಭಾರತದ ಉಜ್ಜೈನಿಯ ಶ್ರೀವಿಶ್ವಕರ್ಮ ಪೀಠದ ಧರ್ಮಾಧಿಕಾರಿಗಳಾದ ವಿಶ್ವಧಾರಣ ಸಮರ್ಥ ಸದ್ಗುರು ಮಹಾರಾಜ್ (ಜಗದೀಶ್ ಮಹಾರಾಜ್) ಹಾಗೂ ರಮೇಶ್ ಜಿ ಮಾನ್ ಶ್ರೀಗಳ ಜೊತೆಗೆ ಆಗಮಿಸಿ ಮಹಾಮಾತೆಯ ದರ್ಶನವನ್ನು ಪಡೆದರು.

ಇದೇ ಸಂದರ್ಭದಲ್ಲಿ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿಗಳು ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರು ಹಾಗೂ ಸದಸ್ಯರು ಆಗಮಿಸಿದ ಅತಿಥಿ ಭಕ್ತರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು. ಕ್ಷೇತ್ರದ ಅರ್ಚಕರು ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments