Sunday, August 9, 2026
Homeಹೆಬ್ರಿಕಳ್ತೂರು ಸಂತೆಕಟ್ಟೆಯಲ್ಲಿ ಮದ್ಯವರ್ಜನ ಶಿಬಿರ

ಕಳ್ತೂರು ಸಂತೆಕಟ್ಟೆಯಲ್ಲಿ ಮದ್ಯವರ್ಜನ ಶಿಬಿರ

ಮದ್ಯ ತ್ಯಜಿಸುವುದರಿಂದ ಕುಟುಂಬವೇ ಬೆಳಗುತ್ತದೆ. – ವಿವೇಕ್ ವಿನ್ಸೆಂಟ್ ಪಾಯಸ್.

ಕಳ್ತೂರು ಸಂತೆಕಟ್ಟೆ : ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಸಂತೆಕಟ್ಟೆ ಚೇರ್ಕಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹೆಬ್ರಿ ಇದರ ಆಶ್ರಯದಲ್ಲಿ ನಡೆಯುತ್ತಿರುವ 2096ನೇ ಮದ್ಯವರ್ಜನ ಶಿಬಿರದ ಮೂರನೇ ದಿನದಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಸ್ ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಮದ್ಯವನ್ನು ತ್ಯಜಿಸುವುದು ಕೇವಲ ನಿಮ್ಮ ಜೀವನವನ್ನಷ್ಟೇ ಅಲ್ಲ, ನಿಮ್ಮ ಕುಟುಂಬದ ಭವಿಷ್ಯವನ್ನೂ ಉಳಿಸುತ್ತದೆ. ಇಂದೇ ವ್ಯಸನಮುಕ್ತ ಜೀವನದತ್ತ ಮೊದಲ ಹೆಜ್ಜೆ ಇಡಿ ಎಂದು ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರೇರಣಾತ್ಮಕ ಮಾರ್ಗದರ್ಶನ ನೀಡಿದರು.

ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಉದಯ ನಾಯಕ್ ,ನಿವೃತ್ತ ಬಿ ಎಸ್ ಎನ್ ಎಲ್ ಅಧಿಕಾರಿ ರಘುರಾಮ ಶೆಟ್ಟಿ , ಉದ್ಯಮಿ ದಿವಾಕರ ಶೆಟ್ಟಿ, ವಲಯದ್ಯಕ್ಷ ಸೀತಾನದಿ ವಿಠಲ ಶೆಟ್ಟಿ , ಡಾ. ವಸಂತ್ ಬಿ ಸಂತೆಕಟ್ಟೆ,
ಸಮಿತಿ ಸದಸ್ಯ ಗೋಪಾಲ ನಾಯಕ್, ಕ್ಷೇತ್ರದ ಯೋಜನಾಧಿಕಾರಿ ರೇಷ್ಮಾ, ವಲಯಾಧ್ಯಕ್ಷ ಜ್ಯೋತಿ, ಶಾಲಿನಿ, ಶೌರ್ಯ ಸಮಿತಿಯ ಕ್ಯಾಪ್ಟನ್ ಸತೀಶ್, ಆರೋಗ್ಯ ಸಹಾಯಕಿ ನೇತ್ರ, ವಲಯ ಮೇಲ್ವಿಚಾರಕಿ ಸುಮನ ಉಪಸಿತರಿದ್ದರು.

ಶಿಬಿರಾಧಿಕಾರಿ ರಮೇಶ್ ಸ್ವಾಗತಿಸಿದರು, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments