Sunday, August 9, 2026
Homeಹೆಬ್ರಿಕುಂದಾಪುರ : ಗುಟ್ಕಾ ಮಾದಕ ದ್ರವ್ಯ ಜಾಗ್ರತಿ ಕಾರ್ಯಾಗಾರ

ಕುಂದಾಪುರ : ಗುಟ್ಕಾ ಮಾದಕ ದ್ರವ್ಯ ಜಾಗ್ರತಿ ಕಾರ್ಯಾಗಾರ

ವಿದ್ಯಾರ್ಥಿ ವೇತನ ವಿತರಣೆ.

ಕುಂದಾಪುರ :ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಹಾಗು ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇವರ ಆಶ್ರಯದಲ್ಲಿ ಗುಟ್ಕಾ ಹಾಗು ಮಾದಕ ದ್ರವ್ಯ ಗಳ ಬಗ್ಗೆ ಜಾಗೃತಿ ಶಿಬಿರ ಹಾಗೂ ವಿತೂರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ಮಿನಿ ಹಾಲ್ ನಲ್ಲಿ ನಡೆಯಿತು.

ಆಧುನಿಕತೆಯ ವೇಗಕ್ಕೆ ತಕ್ಕಂತೆ ವಿದ್ಯಾರ್ಥಿ ಜೀವನ ಬದಲಾವಣೆ ಆಗುತ್ತಿದೆ.ಹಲವು ರೀತಿಯ ಆಮಿಷ ಗಳಿಗೆ ತುತ್ತಾಗಿ ವಿದ್ಯಾರ್ಥಿಗಳು, ಯುವ ಜನರು ಮಾದಕ ದ್ರವ್ಯದಂತಹ ದುಷ್ಟಟ ಕ್ಕೆ ಬಲಿಯಾಗುತ್ತಿದ್ದಾರೆ, ಇದರಿಂದ ಸಮಾಜದಲ್ಲಿ ವೈಪರಿತ್ಯ ಉಂಟಾಗುತ್ತಿದೆ. ವಿದ್ಯಾರ್ಥಿ ಜೀವನ ದುಶ್ಚಟ ಮುಕ್ತವಾಗಿರಬೇಕಾದರೆ ಇಂತಹ ಕಾರ್ಯಕ್ರಮ ನಿರಂತರ ನಡೆಯಬೇಕು ಎಂದು ಇಶಾನಿ ಮೆಡಿಕಲ್ ಸೆಂಟರ್ ನ ಮೆಡಿಕಲ್ ಆಫೀಸರ್ ಡಾ ಸೋನಿ ಡಿ ಕೋಸ್ಟ ಹೇಳಿದರು.

ಲಯನ್ಸ್ ಕ್ಲಬ್ ಕುಂದಾಪುರ ವಯಿಟ್ ಝೋನ್ ಅಧ್ಯಕ್ಷರಾದ ಹುಸೇನ್ ಹೈಕಾಡಿ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ನ ಕಾರ್ಯದರ್ಶಿ ಪ್ರದೀಪ್ ಬಂಗೇರ, ಏನ್ ಏನ್ ಒ ಪ್ರದಾನ ಕಾರ್ಯದರ್ಶಿ ಮೌ ಝಮೀರ್ ಅಹ್ಮದ್ ರಶಾದಿ, ಉಡುಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಫಾಝಿಲ್ ಅಹ್ಮದ್ ಉಡುಪಿ ಉಪಾಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ ಸದಸ್ಯರಾದ ಅಬ್ದುಲ್ ಖಾದರ್ ಮೂಡಗೋಪಾಡಿ, ಮನ್ಸೂರ್ ಇಬ್ರಾಹಿಂ, ಹಾರುನ್ ರಶೀದ್ ಸಾಸ್ತಾನ್ ಕುಂದಾಪುರ ಘಟಕದ ಅಧ್ಯಕ್ಷ ಜಮಾಲ್ ಗುಲ್ವಾಡಿ ಸದ್ಯಸ್ಯ ರಾದ ಝಹಿರ್ ಸಾಸ್ತಾನ ಇನ್ನಿತರರು ಉಪಸ್ಥಿತರಿದ್ದರು.

ಅಬು ಮೊಹಮ್ಮದ್ ಕುಂದಾಪುರ ನಿರೂಪಿಸಿ ವಂದಿಸಿದರು. ಏನ್ ಏನ್ ಒ ಕಮ್ಯುನಿಟಿ ಸೆಂಟರ್ ನ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಸ್ವಾಗತಿಸಿದರು.

ವಿದ್ಯಾರ್ಥಿಗಳು, ಪೋಷಕರು ಹಾಗು ಯುವಕರಿಗೆ ಜಾಗ್ರತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments