Sunday, August 9, 2026
Homeಹೆಬ್ರಿಸಿರಿಬೈಲು ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘ : "ಕೆಸರ್‌ಡ್‌ ಒಂಜಿ ದಿನ" ಕಾರ್ಯಕ್ರಮ.

ಸಿರಿಬೈಲು ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘ : “ಕೆಸರ್‌ಡ್‌ ಒಂಜಿ ದಿನ” ಕಾರ್ಯಕ್ರಮ.

ಅಂದು ಆಟಿ ತಿಂಗಳು ಕಷ್ಟ… ಇಂದು ಆಟಿಯಲ್ಲಿ ಸಂಭ್ರಮ : ಉಮೇಶ ಹೆಗ್ಡೆ ಮಾಣಿಬೆಟ್ಟು.

ಕಡ್ತಲ ಸಿರಿಬೈಲು : ಆಟಿ ತಿಂಗಳ ದಿನಗಳು ಅಂದು ಕಷ್ಟದ ದಿನಗಳು, ಇಂದು ಆಟಿ ಅಂದರೆ ಎಲ್ಲೆಡೆಯೂ ಸಂಭ್ರಮ. ಆಟಿಡೊಂಜಿ ದಿನ, ಕೆಸರಡ್‌ ಒಂಜಿ ದಿನ ಹೆಸರಿನಲ್ಲಿ ಗದ್ದೆಯಲ್ಲಿ ಆಟದ ಸಂಭ್ರಮಗಳು ನಡೆಯುತ್ತವೆ. ಕೃಷಿಯಿಂದ ಯುವ ಜನತೆ ದೂರ ಹೋಗುತ್ತಿರುವ ಈ ಕಾಲದಲ್ಲಿ ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ಕೂಡ “ಕೆಸರ್‌ಡ್‌ ಒಂಜಿ ದಿನ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಕಡ್ತಲ ಮಾಣಿಬೆಟ್ಟು ಉಮೇಶ ಹೆಗ್ಡೆ ಹೇಳಿದರು.

ಅವರು ಭಾನುವಾರ ಕಡ್ತಲ ಸಿರಿಬೈಲು ಕ್ರಷರ್‌ ಬಳಿಯ ಕುರೆಬೆಟ್ಟು ಗದ್ದೆಯಲ್ಲಿ ಸಿರಿಬೈಲು ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನಡೆದ ೮ನೇ ವರ್ಷದ ಕೆಸರ್‌ಡ್‌ ಒಂಜಿ ದಿನ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾನ ಮನಸ್ಕರ ಸಂಘಟನೆಯ ಮೂಲಕ ಸಮಾಜದ ಸೇವೆಯು ನಡೆಯುತ್ತಿರುವುದು ಶ್ಲಾಘನೀಯ. ಉತ್ತಮ ಬೆಳವಣಿಗೆ, ಅಂದು ಆಟಿಯಲ್ಲಿ ಕೃಷಿ ದೈವರಾಧನೆಗೆ ವಿಶೇಷ ಸಂಬಂಧವಿತ್ತು. ಸಂಬಂಧಗಳು ದೂರವಾಗುತ್ತಿರುವ ಈ ಕಾಲದಲ್ಲಿ ಕೆಸರಡ್‌ ಒಂಜಿ ದಿನ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಉಮೇಶ ಹೆಗ್ಡೆ ಹೇಳಿದರು.

ಸಿರಿಬೈಲು ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ “ಕೆಸರ್‌ಡ್‌ ಒಂಜಿ ದಿನ ಗ್ರಾಮೀಣ ಕ್ರೀಡೆಗಳ ಮೂಲಕ ಸಿರಿಬೈಲಿನಲ್ಲಿ ಜನಪದ ಉತ್ಸವದಂತೆ ನಡೆಯುತ್ತಿದೆ. ಆಧುನೀಕತೆಯ ಈ ಕಾಲದಲ್ಲಿ ಯುವ ಮನಸ್ಸುಗಳನ್ನು ಒಗ್ಗೂಡಿಸಲು ಈದು ಅತ್ಯಂತ ಸೂಕ್ತ ಕಾರ್ಯಕ್ರಮ. ಇದರಿಂದ ಊರಿನ ಒಗ್ಗಟ್ಟು ಬಲಗೊಳ್ಳುತ್ತದೆ ಎಂದು ಕಡ್ತಲದ ಖ್ಯಾತ ವೈಧ್ಯರಾದ ಡಾ.ಪ್ರಮೋದ್‌ ಕುಮಾರ್‌ ಹೆಗ್ಡೆ ಹೇಳಿದರು.

ನಮ್ಮ ಸಮಾನ ಮನಸ್ಕ ಯುವಕರ ಒಗ್ಗೂಡುವಿಕೆಯ ಫಲವಾಗಿ ಇಂದು ೮ನೇ ವರ್ಷದ ಸಂಭ್ರಮ ನಡೆಯುತ್ತಿದೆ. 70 ಶೇಕಡದಷ್ಟು ಹಣವನ್ನು ಸಂಸ್ಥೆಯ ಸದಸ್ಯರೇ ಭರಿಸಿ ಕಾರ್ಯಕ್ರಮ ಮಾಡಿ ಖುಷಿ ಕಾಣುತ್ತಾರೆ. ಇದು ಯುವಕರ ಉತ್ತಮ ಮನಸ್ಸು, ಹುಮ್ಮಸ್ಸಿನಿಂದ ನಡಯುತ್ತಿದೆ, ಎಲ್ಲರ ಉಮೇದಿನಲ್ಲಿ ನಡೆಯುವ ಕೆಸರ್‌ಡ್‌ ಒಂಜಿ ದಿನದ ನಮಗೆಲ್ಲ ಯಶಸ್ಸಿನ ಸಂಭ್ರಮ ಎಂದು ಸಿರಿಬೈಲು ಶ್ರೀ ಬರ್ಬರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುನೀಲ್‌ ಕುಮಾರ್‌ ಹೆಗ್ಡೆ ಹೇಳಿದರು.
ಸಿರಿಬೈಲು ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ಶ್ರೀಶ ಜೋಯಿಸ್‌ ಗದ್ದೆಗೆ ಪೂಜೆ ಸಲ್ಲಿಸಿ ಕಾಯಿ ಒಡೆದು ಚಾಲನೆ ನೀಡಿದರು. ಹಿರಿಯರಾದ ಧರ್ಮರಾಜ ಕುದ್ರೆ. 8ನೇ ವರ್ಷದ ಕೆಸರ್‌ಡ್‌ ಒಂಜಿ ದಿನ ಸಂಭ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಕಡ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ಮಕ್ಕಳು, ಯುವಕ ಯುವತಿಯರು ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗಿಯಾಗಿ ಕುರೆಬೆಟ್ಟು ಕೆಸರು ಗದ್ದೆಯಲ್ಲಿ ಸಂಭ್ರಮಿಸಿದರು.

ಪೂರ್ವ ಕಾರ್ಯದರ್ಶಿ ಮಂಜುನಾಥ್‌ ಸಿರಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಂಸ್ಥೆಯ ಕೆಸರ್‌ಡ್‌ ಒಂಜಿ ದಿನ ಸಂಭ್ರಮದ ಜೊತೆಗೆ ಕ್ರೀಡೆ, ಆರೋಗ್ಯ, ಸಾಂಸ್ಕೃತಿಕ ಕಾರ್ಯಕ್ಕೆ ಒತ್ತು ನೀಡುತ್ತಿದೆ. ಆಸಕ್ತರಿಗೆ ಆರ್ಥಿಕ ನೆರವು, ಮಾನವೀಯ ನೆಲೆಯ ಕಾರ್ಯವನ್ನು ಮಾಡುತ್ತಿದೆ. ಬಡವರೊಬ್ಬರಿಗೆ ಮನೆ ನಿರ್ಮಿಸಲು ಸಹಾಯ ನೀಡಿದೆ ಎಂದು ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಹೆಗ್ಡೆ, ಉದ್ಯಮಿ ಕೃಷ್ಣ ಕುಲಾಲ್‌, ಯೋಗ ಶಾಧಕ ಶಿಕ್ಷಕ ಶೇಖರ್‌ ಕಡ್ತಲ, ಸಿರಿಬೈಲು ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ವಿವಿಧ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಮಂಜುನಾಥ್‌ ಸಿರಿಬೈಲು ಸ್ವಾಗತಿಸಿ ಉಪನ್ಯಾಸ ಪ್ರದೀಪ್‌ ಶೆಟ್ಟಿ ನಿರೂಪಿಸಿದರು. ಹರೀಶ ಹೆಗ್ಡೆ ಸಿರಿಬೈಲು ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments