ಪೆರ್ಡೂರು : ಪೆರ್ಡೂರು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸಂಘದ ಆಶ್ರಯದಲ್ಲಿ ಶ್ರೀ ಕಾಳಿಕಾಂಬ ಮಹಿಳಾ ಮಂಡಳಿಯ ವತಿಯಿಂದ ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು.
ವಿಶ್ವಕರ್ಮ ಬ್ರಾಹ್ಮಣ ಸಮಾಜ ಸಂಘ ಮತ್ತು ಶ್ರೀ ಕಾಳಿಕಾಂಬ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಭಕ್ತ ವೃಂದದವರು ಉಪಸ್ಥಿತರಿದ್ದರು. ಅಧ್ಯಕ್ಷೆ ಸುಕನ್ಯಾ ಆಚಾರ್ಯ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.



