ಕಾರ್ಕಳ : ಮಾನವ ಬಂಧುತ್ವ ವೇದಿಕೆ ಕಾರ್ಕಳ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿ ಬಂದುತ್ವ ವೇದಿಕೆಯ ಮುಂದಾಳತ್ವದಲ್ಲಿ ಕಾರ್ಕಳ ಕಾಂಗ್ರೆಸ್ ಕಚೇರಿ ಬಳಿಯಲ್ಲಿ “ಸೌಹಾರ್ದ ಈದ್ ಮಿಲಾದ್” ಆಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯಾದ ಮಾಜಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಭಾಗವಹಿಸಿ ಮಾತನಾಡಿ ಯುವಜನತೆ ಹಾಗೂ ವಿದ್ಯಾರ್ಥಿಗಳು ಈ ದೇಶದ ಸಂಪತ್ತು, ಸರ್ವರಿಗೂ ಸಮಾನವಾದ ಅವಕಾಶ ನೀಡುವ ಸಾಮಾಜಿಕ ನ್ಯಾಯಕ್ಕಾಗಿ ಯುವಜನತೆ ದ್ವನಿಯೆತ್ತಬೇಕು ಮತ್ತು ಯುವಜನತೆ ಮತ್ತು ವಿದ್ಯಾರ್ಥಿ ಸಮೂಹವು ಜೊತೆಯಾಗಿ ಸೌಹಾರ್ದ ಭಾರತವನ್ನು ನಿರ್ಮಿಸಲು ಶ್ರಮಿಸಬೇಕೆಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ರವರು ಮಾತನಾಡಿ ಧಾರ್ಮಿಕ ಸಾಮರಸ್ಯವನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಸೌಹಾರ್ದಪ್ರೀಯ ಮನಸ್ಸುಗಳನ್ನು ಅಭಿನಂದಿಸಿ ಶುಭಾಶಯಗಳನ್ನು ತಿಳಿಸಿದರು.
ರಾಜ್ಯ ಸರ್ಕಾರದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಮುದ್ರಾಡಿಯವರು ತಮ್ಮ ಮಾತನಾಡಿ ಶುಭ ಹಾರೈಸಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅವರು ಮಾತನಾಡಿ ಮೂಡನಂಬಿಕೆ ಕಂದಾಚಾರ ಮುಂತಾದವನ್ನು ಹೋಗಲಾಡಿಸಲು ಶ್ರಮಿಸುತ್ತಿರುವ ಮಾನವ ಬಂಧುತ್ವ ಸಂಘಟನೆಯ ಸಂಚಾಲಕರು ಹಾಗು ಪದಾಧಿಕಾರಿಗಳಿಗೆ ಬ್ಲಾಕ್ ಕಾಂಗ್ರೆಸ್ ಕಾರ್ಕಳದ ಸಂಪೂರ್ಣ ಸಹಕಾರವಿದೆ ಎಂದರು.
ಮಾನವ ಬಂಧುತ್ವ ವೇದಿಕೆಯ ಕಾರ್ಕಳ ಘಟಕ ಸಂಚಾಲಕ ಸುಭಿತ್. ಎನ್.ಆರ್ ಕಾರ್ಯಕ್ರಮದ ದ್ಯೇಯೋದ್ದೇಶಗಳನ್ನು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆ.ಎಂ.ಇ.ಎಸ್ ವಿದ್ಯಾ ಸಂಸ್ಥೆಯ ಅದ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮ್ಮದ್, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಮಿತಿಯ ಸದಸ್ಯರಾದ ರೊನಾಲ್ಡ್ ಮನೋಹರ್, ಮಾಜಿ ಪುರಸಭಾ ಸದಸ್ಯ ಹರ್ಮನ್ ಕ್ಯಾಸ್ತಲಿನೊ, ಬಂಗ್ಲೆಗುಡ್ಡೆ ತೈಬಾ ಗಾರ್ಡನ್ ಪ್ರಾಂಶುಪಾಲ ಕಿಲ್ಲೂರು ಶರೀಪ್ ಶಹದಿ ಮಾತನಾಡಿದರು.
ವೇದಿಕೆಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಸುಧಾಕರ ಕೋಟ್ಯಾನ್, ಯುವ ನ್ಯಾಯವಾದಿ ರಾಘವ ಕುಕ್ಕುಜೆ, ಉದ್ಯಮಿಗಳಾದ ಪಿ.ಎ. ರಹೀಮ್, ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಕಳ ಘಟಕದ ಮಹಮ್ಮದ್ ಗೌಸ್, ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ಸಂಸ್ಕೃತ್ .ಎನ್.ಆರ್, ಉದಿತ್.ಆರ್. ಶೆಟ್ಟಿಗಾರ್, ಹಪೀಪ್ ಹುಸೈನ್, ಇವನ್ಸ್ ವಿನ್ಸ್ಟನ್ ಡಿಸೋಜ, ಆಸೀಮ್ ಹಾಗೂ ಯುವ ಜನರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮಾನವ ಬಂಧುತ್ವ ವೇದಿಕೆಯ ಕರಾವಳಿ ವಿಭಾಗೀಯ ಸಂಚಾಲಕರಾದ ಸತೀಶ್ ಕುಮಾರ್. ಕೆ.ಎಸ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರಿಸಿದರು.
ಸುರಕ್ಷಾ ರಾಜೇಶ್ ದೇವಾಡಿಗ ಪ್ರಾರ್ಥಿಸಿ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ಸಂಚಾಲಕ ನಿತೀಶ್ ಶೆಟ್ಟಿಗಾರ್ ಸ್ವಾಗತಿಸಿದರು, ತೇಜಸ್. ವಿ. ಆಚಾರ್ಯ ವಂದನಾರ್ಪಣೆಗೈದರು. ಮಾಜಿ ಪುರಸಭಾ ಸದಸ್ಯೆ ಶ್ರೀಮತಿ ನಳಿನಿ ಆಚಾರ್ಯ ನಿರೂಪಿಸಿದರು.




