ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಬಾಲಕರಿಗೆ ‘ಹದಿಹರೆಯದ ಸವಾಲುಗಳು ಮತ್ತು ಪರಿಹಾರ’ ಎಂಬ ವಿಷಯದಲ್ಲಿ ಮನಶಾಸ್ತ್ರಜ್ಞ ಗಿರೀಶ್ ತರಬೇತಿಯನ್ನು ನಡೆಸಿಕೊಟ್ಟರು. ಗಿರೀಶ್ ಸಲಹೆ ಕೊಡುವುದಕ್ಕಿಂತ ಆಳಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ಮನವರಿಕೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಮಾತ್ ಪ್ರಾರ್ಥಿಸಿ, ಅಕ್ಞಯ್ ಶೆಟ್ಟಿ ನಿರೂಪಿಸಿದರು. ಸುಚಿತ್ ಶೆಟ್ಟಿ ಸ್ವಾಗತಿಸಿ, ಚಿರಾಗ್ ವಂದಿಸಿದರು.


