Thursday, September 24, 2026
HomeUncategorizedಹೆಬ್ರಿ ತಾಲ್ಲೂಕು ಕಚೇರಿಗೆ ಲೋಕಾಯುಕ್ತ ತಂಡದ ದಿಡೀರ್ ಭೇಟಿ; ಬಾಕಿ ಕಡತಗಳ ಪರಿಶೀಲನೆ

ಹೆಬ್ರಿ ತಾಲ್ಲೂಕು ಕಚೇರಿಗೆ ಲೋಕಾಯುಕ್ತ ತಂಡದ ದಿಡೀರ್ ಭೇಟಿ; ಬಾಕಿ ಕಡತಗಳ ಪರಿಶೀಲನೆ

.ಜನನ ಮರಣ ಕಡತ ಸೇರಿ ಹಲವಾರು ಕಡತಗಳು ಬಾಕಿ 

ಶೀಘ್ರ ಕಡತ ವಿಲೇವಾರಿಗೆ ಸೂಚನೆ.

ಉಡುಪಿ : ಹೆಬ್ರಿ ತಾಲ್ಲೂಕು ಕಚೇರಿಗೆ ಗುರುವಾರ ಲೋಕಾಯುಕ್ತ ಡಿವೈಎಸ್ ಪಿ ಹಾಲಮೂರ್ತಿ ನೇತ್ರತ್ವದ ತಂಡ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿವೃತ್ತ ಸೈನಿಕರಿಗೆ ಜಮೀನು ಮಂಜೂರಾತಿಯ ಬಗ್ಗೆ ದೂರುಗಳಿರುವುದರಿಂದ ಶೀಘ್ರದಲ್ಲಿ ಅವರಿಗೆ ಜಮೀನು ಮಂಜೂರಾತಿಯ ಬಗ್ಗೆ ಮಾಹಿತಿ ನೀಡುವುದರೊಂದಿಗೆ, ಶೀಘ್ರವಾಗಿ
ಕಡತ ವಿಲೇವಾರಿ ಕೆಲಸ ಮಾಡಲು ಸಿಬ್ಬಂದಿ ಮಹೇಶ್ ಅವರಿಗೆ ಡಿವೈಎಸ್ಪಿ ಹಾಲಮೂರ್ತಿ ಸೂಚನೆ ನೀಡಿದರು.

ವಿವಿಧ ಹಂತದಲ್ಲಿ ಆರ್. ಆರ್. ಟಿ ವಿಭಾಗದಲ್ಲಿ 40 ಫೈಲ್, 94ಸಿ ಯಲ್ಲಿ 531, 53 ಹಾಗೂ 57 ರಲ್ಲಿ 2700 ಕಡತ, ಜನನ ಮರಣದಲ್ಲಿ 27 ಕಡತಗಳು ಬಾಕಿ ಇರುವುದನ್ನು ಡಿವೈಎಸ್ಪಿ ಹಾಲಮೂರ್ತಿ ಅವರ ತಂಡ ಪರಿಶೀಲಿಸಿದೆ. ಕೆಲವೊಂದು ಕಡತಗಳು ಸುದೀರ್ಘ ಅವಧಿಯಿಂದ ಯಾವುದೇ ಕಾರಣ ನೀಡದೆ ಬಾಕಿಇರಿಸಲಾಗಿದೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.

ಅನೇಕ ಕಡತಗಳಿಗೆ ಯಾವುದೇ ಕಾರಣಗಳು ಇಲ್ಲದೆ ಇರುವುದರಿಂದ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಜನನ ಮರಣ ಕಡತ ಬಾಕಿ : 27 ಜನನ ಮರಣ ಕಡತಗಳು ಯಾವುದೇ ಕಾರಣವಿಲ್ಲದೆ ಇರಿಸಿಕೊಂಡಿದ್ದರಿಂದ, ಸಂಬಂಧಪಟ್ಟವರ ವಿರುದ್ಧ ಡಿವೈಎಸ್ಪಿ ಗರಂ ಆಗಿದ್ದಾರೆ.
ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ವರದಿಯಲ್ಲಿ ಸೂಚಿಸಿದ್ದಾರೆ.

ಲೋಕಾಯುಕ್ತ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಸತೀಶ್ ಹಂದಾಡಿ, ಪ್ರಸನ್ನ, ಅಬ್ದುಲ್ ಜಲಲ್, ಸುದೀಪ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!