Thursday, September 24, 2026
HomeUncategorizedಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) - ಹೆಬ್ರಿ ತಾಲೂಕು ಮಟ್ಟದ ಕ್ರೀಡಾಕೂಟ; ಹೆಬ್ರಿ ತಾಲೂಕುಮಟ್ಟದ...

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) – ಹೆಬ್ರಿ ತಾಲೂಕು ಮಟ್ಟದ ಕ್ರೀಡಾಕೂಟ; ಹೆಬ್ರಿ ತಾಲೂಕುಮಟ್ಟದ ಕಬಡ್ಡಿಯಲ್ಲಿ ಅಮೃತ ಭಾರತಿಗೆ ಡಬಲ್ ಸಾಧನೆ: ಬಾಲಕಿಯರ ತಂಡಕ್ಕೆ ಪ್ರಥಮ, ಬಾಲಕರ ತಂಡಕ್ಕೆ ದ್ವಿತೀಯ

*ಹೆಬ್ರಿ:* ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಮುನಿಯಾಲು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹೆಬ್ರಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ *ಪಿ.ಆರ್.ಎನ್. ಅಮೃತ ಭಾರತಿ ಪದವಿ ಪೂರ್ವ ಕಾಲೇಜು, ಹೆಬ್ರಿಯ ಬಾಲಕಿಯರ ತಂಡವು ಪ್ರಥಮ ಸ್ಥಾನ* ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಬಾಲಕರ ತಂಡವು *ದ್ವಿತೀಯ ಸ್ಥಾನ* ಪಡೆದಿದೆ.

*ವೈಯಕ್ತಿಕ ಪ್ರಶಸ್ತಿಗಳು:*
ಬಾಲಕರ ವಿಭಾಗದಲ್ಲಿ ಬೆಸ್ಟ್ ಡಿಫೆಂಡರ್ ಆಗಿ *ಸೂರ್ಯ ತೇಜಸ್ ಪಿ.,* ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ರೈಡರ್ ಆಗಿ *ದಿಶಾ* ಹಾಗೂ ಆಲ್ ರೌಂಡರ್ ಆಗಿ *ಸಿಂಚನಾ* ಪ್ರಶಸ್ತಿ ಪಡೆದಿದ್ದಾರೆ.

ಜಿಲ್ಲಾಮಟ್ಟದ ಪಂದ್ಯಾಟಕ್ಕೆ *ಸೂರ್ಯ ತೇಜಸ್ ಪಿ., ಭುವನ್ ಎಚ್.ಎಸ್., ನಿಖಿಲ್ ಜೆ. ಶೆಟ್ಟಿ* ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕಿ ಪಾವನ ಶೆಟ್ಟಿ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!