ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟಣೆ ಸೋಮವಾರ ನಡೆಯಿತು.
ಅಮೃತ ಭಾರತಿ ಟ್ರಸ್ಟ್ ಸದಸ್ಯ ಗಣೇಶ್ ಕಿಣಿ ಬೆಳ್ವೆ ವಿದ್ಯಾರ್ಥಿ ಸಂಘ ಉದ್ಘಾಟಿಸಿ ವಿದ್ಯಾರ್ಥಿ ನಾಯಕ ಮತ್ತು ಕಾರ್ಯದರ್ಶಿಗಳಿಗೆ ಬ್ಯಾಜ್ ತೊಡಿಸಿದರು. ಭಗವದ್ಗೀತೆಯ ಎರಡನೇ ಅಧ್ಯಾಯದ ವಿಚಾರಗಳನ್ನು ನಾಯಕತ್ವಕ್ಕೆ ಹೇಗೆ ಅನ್ವಯಿಸಬೇಕೆಂದು ತಿಳಿಸಿದರು. ನಾಯಕನಾದರೂ ಗುರುವಿನ ಆಶೀರ್ವಾದವನ್ನು ಪಡೆದು ದೊಡ್ಡ ಸಾಧನೆ ಮಾಡಿದವರು ಅನೇಕ ಮಂದಿ ಇದ್ದಾರೆ. ಸಮಾಜದ ಕಟ್ಟಕಡೆಯ ಪ್ರಜೆಯೂ ಮುಖ್ಯವಾಹಿನಿಗೆ ಬರಲು ನಾಯಕನು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಚೌಕಟ್ಟನ್ನು ಮೀರದೆ ಸಾಮಾರಸ್ಯದ ಕೊಂಡಿಯಲ್ಲಿ ಎಲ್ಲರನ್ನೂ ಬೆಳೆಸುವ ಗುಣವನ್ನು ನಾಯಕನಾದವನು ಮೈಗೂಡಿಸಿಕೊಳ್ಳಬೇಕೆಂದರು.
ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಕಾಲೇಜಿನ ಅಧ್ಯಕ್ಷ ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಒಳ್ಳೇಯ ವೈಧ್ಯರು, ಎಂಜಿನಿಯರ್ ಗಳಂತೆ ನಮಗೆ ಒಳ್ಳೆಯ ರಾಜಕಾರಿಣಿಗಳು ಬೇಕಾಗಿದ್ದಾರೆ. ಭ್ರಷ್ಟತೆಯ ವಿರುದ್ಧ ಧ್ವನಿ ಎತ್ತಿ ಉತ್ತಮ ಸಮಾಜ ನಿರ್ಮಾಣದ ಗುರಿಯನ್ನು ಹೊಂದಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ವಿದ್ಯಾರ್ಥಿ ಸಂಘದ ನಾಯಕರಿಗೆ ಮತ್ತು ವಿವಿಧ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕಾಲೇಜಿನ ಉಪನ್ಯಾಸಕರು ಪದಾಧಿಕಾರಿಗಳಿಗೆ ಬ್ಯಾಜ್‌ಗಳನ್ನು ತೊಡಿಸಿದರು. ಟ್ರಸ್ಟ್ ಕರ‍್ಯದರ್ಶಿ ಎಚ್. ಗುರುದಾಸ್ ಶೆಣೈ, ಟ್ರಸ್ಟಿಗಳಾಗಿರುವ ಯೋಗೀಶ್ ಭಟ್, ವಿಷ್ಣುಮೂರ್ತಿ ನಾಯಕ್, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಹಾಸ್ಟೆಲ್ ಕಮೀಟಿ ಸದಸ್ಯ ರಾಮಕೃಷ್ಣ ಆಚಾರ್, ಕ್ಯಾಂಪಸ್ ಮೇಲ್ವಿಚಾರಕರಾದ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿರಾಗ್. ಆರ್. ಪೂಜಾರಿ, ಕರ‍್ಯದರ್ಶಿ ಪ್ರಿಯಾಂಕ, ಜೊತೆ ಕರ‍್ಯದರ್ಶಿಗಳಾಗಿ ನಂದಾ ದೀಪ ಮತ್ತು ಅನಂತ್ ಭುವನ್ ಮತ್ತು ಉಳಿದ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾತ್ ಪ್ರಾರ್ಥಿಸಿ, ರೀಶಾ ಸ್ವಾಗತಿಸಿ, ಧೃತಿ. ಎಸ್. ಪೂಜಾರಿ ನಿರೂಪಿಸಿ, ಚಿರಾಗ್. ಆರ್. ಪೂಜಾರಿ ವಂದಿಸಿದರು.


