Sunday, August 9, 2026
Homeಹೆಬ್ರಿದರ್ಬುಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ಕೊಡುಗೆ

ದರ್ಬುಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ಕೊಡುಗೆ

ಹೆಬ್ರಿ: ದರ್ಬುಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ದಾನಿಗಳು ನೀಡಿದ ರೂ. 25000 ಮೌಲ್ಯದ  ಬ್ಯಾಗ್, ಕೊಡೆ ಊಟದ ಸ್ಟೀಲ್ ಬಟ್ಟಲು ಸ್ಟೀಲ್ ಲೋಟ ಸಹಿತ ಕಲಿಕಾ ಪರಿಕರಗಳ ಕೊಡುಗೆ ಹಸ್ತಾಂತರ ಇತ್ತೀಚೆಗೆ ಶಾಲೆಯಲ್ಲಿ ನಡೆಯಿತು.

ದಾನಿಗಳಾದ ಪ್ರಭಾಕರ ಶೆಟ್ಟಿ  ಮತ್ತು ಪುಷ್ಪಾವತಿ ಶೆಟ್ಟಿ ದಂಪತಿಗಳ ಸುಪುತ್ರ ದೀಕ್ಷಿತ್‌ ಶೆಟ್ಟಿಯವರ ಸಹೋದರ ಮುಂಬೈ ಉದ್ಯಮಿ ದೀಪಕ್‌ ಶೆಟ್ಟಿ ಎಸ್ಒಎಸ್ ಚೈಲ್ಡ್ ಚಾರಿಟೇಬಲ್ ಟ್ರಸ್ಟ್ ಮುಂಬೈ ಟ್ರಸ್ಟ್ ಮೂಲಕ ಕೊಡುಗೆಯಾಗಿ ನೀಡಿದ ಪರಿಕರಗಳನ್ನು ದೀಕ್ಷಿತ್ ಶೆಟ್ಟಿ ಸಹೋದರ ದೀಪಕ್ ಶೆಟ್ಟಿ ಕಡ್ತಲ ಶಾಲಾ ಮಕ್ಕಳಿಗೆ ಹಸ್ತಾಂತರಿಸಿದರು.

ಅಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಇಂದಿರಾ ನಾಯಕ್ ವಹಿಸಿದ್ದರು. ಸಂಜೀವ ನಾಯಕ್, ನಿತ್ಯಾನಂದ ಕುಲಾಲ್, ವಿದ್ಯಾನಂದ ಕುಲಾಲ್ ಅಂಗನವಾಡಿ ಶಿಕ್ಷಕಿ ಉಮಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕರಾದ ಸತೀಶ್ಚಂದ್ರ ಬಾಬು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಮಂಜುಳಾ ನಿರೂಪಿಸಿ, ಶಿಕ್ಷಕಿ ರಚನ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments