Sunday, August 9, 2026
Homeಶಿವಪುರ ಗ್ರಾಮ ಪಂಚಾಯತ್‌ಜುಲೈ - 12 ರಂದು ಖಜಾನೆಯಲ್ಲಿ ಶ್ರೀದುರ್ಗಾದೇವಿ ಭಜನಾ ಮಂಡಳಿ ಲೋಕಾರ್ಪಣೆ. - ಭಜನಾ ಮಂಗಲೋತ್ಸವ

ಜುಲೈ – 12 ರಂದು ಖಜಾನೆಯಲ್ಲಿ ಶ್ರೀದುರ್ಗಾದೇವಿ ಭಜನಾ ಮಂಡಳಿ ಲೋಕಾರ್ಪಣೆ. – ಭಜನಾ ಮಂಗಲೋತ್ಸವ

ಶಿವಪುರ (ಖಜಾನೆ ) : ಶಿವಪುರ ಗ್ರಾಮದ ಖಜಾನೆಯಲ್ಲಿ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದಲ್ಲಿ ಜುಲೈ 12ರಂದು ಭಾನುವಾರ 4 ರಿಂದ ಶ್ರೀದುರ್ಗಾದೇವಿ ಭಜನಾ ಮಂಡಳಿಯ ಉದ್ಘಾಟನೆ, ಭಜನಾ ಮಂಗಲೋತ್ಸವ ಮತ್ತು ಸಾಮೂಹಿಕ ಶ್ರಿ ಸತ್ಯನಾರಾಯಣ ಪೂಜೆ ನಡೆಯಲಿದೆ.

ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ಆಡಳಿತ ಮೋಕ್ತೇಸರ ರಾಜಾರಾಮ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಶಾಸಕ ಸುನೀಲ್‌ ಕುಮಾರ್‌, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಶ್ರೀಕಾಂತ್‌ ಶೆಟ್ಟಿ ಕಾರ್ಕಳ, ಶ್ರೀದುರ್ಗಾದೇವಿ ಭಜನಾ ಮಂಡಳಿಯ ಅಧ್ಯಕ್ಷ ಯೋಗೀಶ ಶೆಟ್ಟಿ ಭಾಗವಹಿಸುವರು. ಸೂರಿಮಣ್ಣು ಮಠದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ ಸೂರಿಮಣ್ಣು ಮತ್ತು ಕಾರ್ಕಳ ತಾಲ್ಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಹರೀಶ ಹೆಗ್ಡೆ ಕಡ್ತಲ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ನೂತನ ಶ್ರೀದುರ್ಗಾದೇವಿ ಭಜನಾ ಮಂಡಳಿಯ ಅಧ್ಯಕ್ಷರಾಗಿ ಯೋಗೀಶ ಶೆಟ್ಟಿ, ಕಾರ್ಯದರ್ಶಿಯಾಗಿ ಸುರೇಶ ನಾಯ್ಕ್‌ ಮತ್ತು ಕೋಶಾಧಿಕಾರಿಯಾಗಿ ಗೀತಾ ಶೆಟ್ಟಿ ಮತ್ತು ಹಲವು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments