ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಜಿಲ್ಲೆಯ ಉನ್ನತ ಕ್ಲಬ್ -ಮಿಥುನ್ ಹೆಗ್ಡೆ.
ಹೆಬ್ರಿ : ಸಮಾಜ ಜನರ ಸೇವೆಯನ್ನು ನಿರಂತರವಾಗಿ ಮಾಡುತ್ತಿರುವ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಜಿಲ್ಲೆಯ ಉನ್ನತ ಕ್ಲಬ್, ಊರಿಗೆ ಹಲವಾರು ಶಾಶ್ವತ ಕಾರ್ಯಕ್ರಮಗಳನ್ನು ನೀಡಿದೆ ಎಂದು ಲಯನ್ಸ್ ಪ್ರಾಂತೀಯ ಪೂರ್ವಾಧ್ಯಕ್ಷ ಮಿಥುನ್ ಆರ್ ಹೆಗ್ಡೆ ಪಡುಬಿದ್ರೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಬುಧವಾರ ಹೆಬ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ನಾಡ್ಪಾಲು ಹರೀಶ ಶೆಟ್ಟಿ ಮತ್ತವರ ತಂಡಕ್ಕೆ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಮುದ್ದೂರು ವಿಎಸ್ಎಸ್ ಶಾಲೆಯ ಅಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ ಮಾತನಾಡಿ ಜನಸೇವಾ ಸಂಸ್ಥೆಯಲ್ಲಿ ಅಧ್ಯಕ್ಷರಾಗುವುದು ಅದು ಅಧಿಕಾರ ಅಲ್ಲ, ಜನಸೇವೆಗೆ ದೊರೆಯುವ ಅವಕಾಶ, ಲಯನ್ಸ್ ಕಲ್ಬ್ ಮೂಲಕ ಹರೀಶ ಶೆಟ್ಟಿಯವರು ಜನರ ಸೇವೆಯನ್ನು ಮಾಡಲಿ ಎಂದರು.
ನಿರ್ಗಮನ ಅಧ್ಯಕ್ಷೆ ಆಶಾ ಬಿ. ಶೆಟ್ಟಿ ಸೇವಾವಧಿಯಲ್ಲಿ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ಹರೀಶ ಶೆಟ್ಟಿ ನಾಡ್ಪಾಲು ಮಾತನಾಡಿ ಜನಸೇವೆಗೆ ದೊರೆತ ಅವಕಾಶವನ್ನು ಬಳಸಿ ಸೇವೆಯನ್ಬನು ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಿಗೆ ಆರ್ಥಿಕ ನೆರವು, ಕೊಡುಗೆಗಳ ಹಸ್ತಾಂತರ, ಅನಾರೋಗ್ಯಕ್ಕೆ ಸಹಾಯನಿಧಿ ಹಸ್ತಾಂತರ ನಡೆಯಿತು.
ಜನಪರ ಹೋರಾಟಗಾರ ಕೆರೆಬೆಟ್ಟು ಸಂಜೀವ ಶೆಟ್ಟಿ, ನಿರ್ಗಮನ ಅಧ್ಯಕ್ಷೆ ಆಶಾ ಭುಜಂಗ ಶೆಟ್ಟಿ, ಮಿಥುನ್ ಆರ್ ಹೆಗ್ಡೆ ಸಹಿತ ಹಲವರನ್ನು ಗೌರವಿಸಲಾಯಿತು. ಸ್ವರಾಜ್ ಎನ್ ಅಡ್ಯಂತಾಯ, ರಾಘವೇಂದ್ರ ನಾಯ್ಕ್ ಮತ್ತು ನಾಗರಾಜ ಬಿ ಶೆಟ್ಟಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರಸಾದ ರೈ, ನೂತನ ಕಾರ್ಯದರ್ಶಿ ರಘುರಾಮ ಶೆಟ್ಟಿ, ಕೋಶಾಧಿಕಾರಿ ಮಹಾಬಲ ಶೆಟ್ಟಿ, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ತೋಮಸ್ ಲೂಕಸ್ ಅಜೆಕಾರು, ವಲಯಾಧ್ಯಕ್ಷ ಸುಧೀರ್ ಹೆಗ್ಡೆ ಹಿರಿಯಡ್ಕ, ಪ್ರಾಂತೀಯ ಕಾರ್ಯದರ್ಶಿ ದಿನೇಶ ಕುಮಾರ್ ಅಜೆಕಾರು, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಮತ್ತು ವಿವಿಧ ಲಯನ್ಸ್ ಕ್ಲಬ್ ಸದಸ್ಯರು, ಪ್ರಮುಖರು ಭಾಗವಹಿಸಿದ್ದರು. ಹೆಬ್ರಿ ಟಿ.ಜಿ.ಆಚಾರ್ಯ, ಬೇಳಂಜೆ ಹರೀಶ ಪೂಜಾರಿ ಮತ್ತು ಕೃಷ್ಣ ಶೆಟ್ಟಿ ಪರಿಚಯಿಸಿದರು. ಸ್ನೇಹಲತಾ ಟಿ.ಜಿ. ನಿರೂಪಿಸಿದರು.



